twitter
    For Quick Alerts
    ALLOW NOTIFICATIONS  
    For Daily Alerts

    ಸೆಲ್ಯುಲಾಯ್ಡ್‌ನಲ್ಲಿ ಟಿ ಪಿ ಕೈಲಾಸಂ ನಾಟಕಗಳು

    By Rajendra
    |

    'ಕನ್ನಡಕ್ಕೊಬ್ನೆ ಕೈಲಾಸಂ", ಎಂದು ಎಲ್ಲರ ಬಾಯಲ್ಲೂ ಶಹಬ್ಬಾಸ್ ಗಿರಿ ಗಿಟ್ಟಿಸಿದವರು ತ್ಯಾಗರಾಜ ಪರಮಶಿವ ಕೈಲಾಸಂ. ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಆಧುನಿಕ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಿವೆ.

    ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಸಾಧಿಸಿದ್ದ ಟಿ ಪಿ ಕೈಲಾಸಂ ಅವರು ಹೋಮ್ ರೂಲ್, ಸೂಳೆ, ಗಂಡಸ್ಕತ್ರಿ ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಈಗ ಈ ಎಲ್ಲಾ ನಾಟಕಗಳನ್ನು 45 ನಿಮಿಷಗಳ ಕಿರುಚಿತ್ರಗಳಾಗಿ ಬದಲಾಯಿಸಿದ್ದಾರೆ ಎಂ ಜಿ ಶ್ರೀನಿವಾಸ್.

    ಈ ಕಿರುಚಿತ್ರಕ್ಕೆ ಕೈಲಾಸಂ ಅವರ ಶೈಲಿಯಲ್ಲೇ ವಿಭಿನ್ನವಾಗಿ 'ಸಿಂಪ್ಲಿ ಕೈಲಾವ್‍ಸಂ' ಎಂದು ಹೆಸರಿಡಲಾಗಿದೆ(Simply Kailawesome). ಈ ಕಿರುಚಿತ್ರವನ್ನು ನಿರ್ದೇಶಿಸುವ ಜೊತೆಗೆ ಕೈಲಾಸಂ ಅವರ ಪಾತ್ರವನ್ನು ಶ್ರೀನಿವಾಸ್ ಅವರು ಪೋಷಿಸಿರುವುದು ವಿಶೇಷ. ಛಾಯಾಸಿಂಗ್ ಸಹ ಮುಖ್ಯ ಪಾತ್ರವನ್ನು ಪೋಷಿಸಿದ್ದಾರೆ.

    ಹನುಮಂತನಗರದ ಎಚ್ ಎನ್ ಕಲಾ ಸೌಧದಲ್ಲಿ ಸಿಂಪ್ಲಿ ಕೈಲಾವ್‌ಸಂ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಎಸ್ ವಿ ಬಾಬು ನಿರ್ಮಾಣ ಚಿತ್ರಕ್ಕಿದೆ. ಟಿ ಪಿ ಕೈಲಾಸಂ ರಚಿಸಿರುವ ಇಪ್ಪತ್ತಕ್ಕೂ ಹೆಚ್ಚು ಹಾಸ್ಯ ನಾಟಕಗಳ ಪೈಕಿ ಟೊಳ್ಳು ಗಟ್ಟಿ, ಹೋಮ್ ರೂಲ್, ಸಾತು ಪಾತು, ಗಂಡಸ್ಕತ್ರಿ ಮತ್ತು ಸೂಳೆ ನಾಟಕಗಳನ್ನು ಮಾತ್ರ ಶ್ರೀನಿವಾಸ್ ಆಯ್ಕೆ ಮಾಡಿಕೊಂಡಿದ್ದಾರೆ.

    ಈ ಚಿತ್ರಕ್ಕೆ ಹಿನ್ನೆಲೆ ಧ್ವನಿಯನ್ನು ನಟ ಶ್ರೀನಗರ ಕಿಟ್ಟಿ ಕೊಟ್ಟಿರುವುದು ಮತ್ತೊಂದು ವಿಶೇಷ.ಎಚ್ ಎನ್ ಕಲಾಸೌಧದಲ್ಲಿ ಸಿಂಪ್ಲಿ ಕೈಲಾವ್‌ಸಂ ಚಿತ್ರದ ಪ್ರದರ್ಶನ ಅಕ್ಟೋಬರ್ 8ರಿಂದ(8,9,10 ಮತ್ತು 15,16,17) ಆರು ದಿನಗಳ ಕಾಲ ನಡೆಯಲಿದೆ. ಟಿಕೆಟ್ ದರ ರು.99. ಪ್ರತಿದಿನ ಸಂಜೆ 7 ಮತ್ತು 9 ಗಂಟೆಗೆ ಎರಡು ಪ್ರದರ್ಶನಗಳಿರುತ್ತವೆ.

    ವಿಡಿಯೋ: ಸಿಂಪ್ಲಿ ಕೈಲಾಸಂ|| ಹೃದಯದಲಿ ಇದೇನಿದು ||ಗಾನಾ ಬಜಾನಾ

    Monday, October 4, 2010, 18:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X