Just In
Don't Miss!
- News
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಭಾನುವಾರದ ಪರೀಕ್ಷೆ ಮುಂದೂಡಿಕೆ
- Automobiles
ಮಾನ್ಸ್ಟರ್ ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಡುಕಾಟಿ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಜಣ್ಣ ಅಭಿನಯದಲ್ಲಿ ಮೌಂಟ್ ಎವರೆಸ್ಟ್ ಇದ್ದಂತೆ
ವರನಟ ಡಾ.ರಾಜ್ ಕುಮಾರ್ ಅವರು ಮೌಂಟ್ ಎವರೆಸ್ಟ್ ಇದ್ದಂತೆ. ಅವರ ವ್ಯಕ್ತಿತ್ವ ಅಷ್ಟು ಎತ್ತರದ್ದು. ಅವರ ವ್ಯಕ್ತಿತ್ವವನ್ನು ನಾವು ದೂರದಿಂದ ನೋಡಬಹುದಷ್ಟೆ. ಅವರ ಹತ್ತಿರಕ್ಕೆ ಹೋಗಲು ಸಾಧ್ಯವಿಲ್ಲ ಎಂದಿದ್ದಾರೆ ನವರಸ ನಾಯಕ ಜಗ್ಗೇಶ್. ಛಾಯಾಗ್ರಹಕ ಕೆ ಪ್ರವೀಣ್ ನಾಯಕ್ ಹೊರತಂದಿರುವ ಬಲು ಅಪರೂಪದ ಕೃತಿ "ರಾಜ್ ಕುಮಾರ್ ಒಂದು ಬೆಳಕು" ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ತಮ್ಮ ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದ ಅವರು ನಿರ್ಮಾಪಕರನ್ನು ಅನ್ನ ಕೊಟ್ಟ ದೇವರು ಎಂದು ಕರೆಯುತ್ತಿದ್ದರು. ಈ ಮಾತುಗಳು ಅವರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿಯಾಗುತ್ತವೆ. ಈ ರೀತಿಯ ದೊಡ್ಡ ಮಾತುಗಳನ್ನು ಬೇರಾವ ನಟನೂಹೇಳಿಲ್ಲ ಎಂದು ಜಗ್ಗೇಶ್ ಈ ಸಂದರ್ಭದಲ್ಲಿ ಹೇಳಿದರು.
ರಾಘವೇಂದ್ರ ರಾಜ್ ಕುಮಾರ್ ಅವರು ಮಾತನಾಡುತ್ತಾ, ಅಪ್ಪಾಜಿ ಅವರ ಸರಳ, ಸಜ್ಜನಿಕೆಯನ್ನು ಇನ್ನಷ್ಟು ಅರ್ಥಪೂರ್ಣವಾಗಿ ಅರಿಯಲು ಈ ಕೃತಿ ಸಹಾಯಕವಾಗುತ್ತದೆ. ಅಪ್ಪಾಜಿ ಅವರ ಮೇರು ವ್ಯಕ್ತಿತ್ವವನ್ನು ಪ್ರವೀಣ್ ನಾಯಕ್ ಕೃತಿಯಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಮುಂದೆ ಉತ್ತಮ ಕಲಾವಿದರು ಬರಬಹುದು. ಆದರೆ ಅಪ್ಪಾಜಿ ಅವರಂತಹ ಸರಳ, ಸಜ್ಜನಿಕೆಯ ನಟ ದೊರೆಯುವುದು ಅಪರೂಪ ಎಂದರು.
ಅಪ್ಪಾಜಿ ಅವರು ಹಣ,ಖ್ಯಾತಿ, ಯಶಸ್ಸು ಎಲ್ಲವೂ ಇದ್ದರೂ ಎಂದೂ ಅಹಂಭಾವದಿಂದ ನಡೆದುಕೊಳ್ಳಲಿಲ್ಲ. ಅಪ್ಪಾಜಿ ಅವರ ಅಭಿನಯಕ್ಕಿಂತಲೂ ಅವರ ಸರಳ ಜೀವನವನ್ನು ಜನ ತುಂಬ ಇಷ್ಟಪಟ್ಟಿದ್ದರು. ಅಪ್ಪಾಜಿ ಮತ್ತು ಪ್ರವೀಣ್ ಅವರ ನಡುವೆ ವಯಸ್ಸಿ ಅಂತರ ಮೀರಿದ ಸ್ನೇಹ ಸಂಬಂಧವಿತ್ತು. ಕುಟುಂಬದವರೊಂದಿಗೆ ಹಂಚಿಕೊಳ್ಳಲಾಗದ ಭಾವನೆಗಳನ್ನು ಅವರೊಂದಿಗೆ ಅಪ್ಪಾಜಿ ಹಂಚಿಕೊಳ್ಳುತ್ತಿದ್ದರು ಎಂದು ರಾಘಣ್ಣ ಸ್ಮರಿಸಿಕೊಂಡರು.
ಈ ಕೃತಿ ಅಪ್ಪಾಜಿ ಅವರ ಅಭಿಮಾನಿಗಳಿಗೆ ಸಂಗ್ರಹಯೋಗ್ಯ ಕೃತಿಯಾಗಲಿದೆ. ಪುಸ್ತಕದಲ್ಲಿ ಅಪ್ಪಾಜಿ ಬಗ್ಗೆ ಸಾಕಷ್ಟು ಮಾಹಿತಿಗಳಿವೆ ಎಂದು ಪುನೀತ್ ರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರವೀಣ್ ನಾಯಕ್ ಮಾತನಾಡುತ್ತಾ, ರಾಜ್ ಅವರೊಂದಿಗಿನ ಅನುಭವಗಳನ್ನು ಇಲ್ಲಿ ದಾಖಲಿಸಿದ್ದೇನೆ. ಪುಸ್ತಕಕ್ಕೆ ಬೇಕಾದ ಛಾಯಾಚಿತ್ರಗಳನ್ನು ಕಲೆ ಹಾಕಲು ಎರಡು ವರ್ಷ ಬೇಕಾಯಿತು. ನಿಜಕ್ಕೂ ನನಗೆ ಇದೊಂದು ದೊಡ್ಡ ಸವಾಲಾಗಿತ್ತು ಎಂದರು.
ರಾಜ್ ಕುಮಾರ್ ಒಂದು ಬೆಳಕು ಕೃತಿ ಕನ್ನಡ ಹಾಗೂ ಇಂಗ್ಲಿಷ್ (Rajkumar A Journey with The Legend) ಭಾಷೆಗಳಲ್ಲಿ ಬಿಡುಗಡೆಯಾಗಿದೆ. ತುಂಬ ಅಪರೂಪದ ಛಾಯಾಚಿತ್ರಗಳನ್ನು ಅತ್ಯುತ್ತಮ ಗುಣಮಟ್ಟದ ಕಾಗದಲ್ಲಿ ಮುದ್ರಿದಲಾಗಿದೆ. ಪುಸ್ತಕದ ಬೆಲೆ ರು.1,600. ರಾಜ್ ಜೀವನದ ಎಲ್ಲ ಪ್ರಮುಖ ಘಟ್ಟಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಿರುವುದು ವಿಶೇಷ.