twitter
    For Quick Alerts
    ALLOW NOTIFICATIONS  
    For Daily Alerts

    'ಬೆಳ್ಳಿ ಹೆಜ್ಜೆ'ಯಲ್ಲಿ ಬಿ.ಸರೋಜಾದೇವಿ

    By Staff
    |

    ಕರ್ನಾಟಕಚಲನಚಿತ್ರ ಅಕಾಡೆಮಿ ನಡೆಸಿಕೊಡುವ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಈ ಬಾರಿ ದಕ್ಷಿಣ ಭಾರತದ ಖ್ಯಾತ ಅಭಿನೇತ್ರಿ ಬಿ ಸರೋಜಾದೇವಿ ಪಾಲ್ಗೊಳ್ಳಲಿದ್ದಾರೆ. ಚಿತ್ರರಸಿಕರ ಪಾಲಿಗೆ ಜನವರಿ 9ರಂದು ನಡೆಯುವ ವಿಭಿಷ್ಟವಾದ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಸರೋಜಾದೇವಿ ಅವರೊಂದಿಗೆ ಸಂವಾದ ಮಾಡುವ ಸುವರ್ಣ ಅವಕಾಶ ಲಭಿಸಲಿದೆ.

    ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಅಭಿನಯಿಸಿರುವ ಬಿ ಸರೋಜಾ ದೇವಿ ಅವರು ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಹಲವು ಖ್ಯಾತ ನಟರೊಂದಿಗೆ ಅಭಿನಯಿಸಿದ್ದರು. ಅವರಲ್ಲಿ ಮುಖ್ಯವಾಗಿ ಡಾ.ರಾಜ್ ಕುಮಾರ್, ಕಲ್ಯಾಣ್‌ಕುಮಾರ್, ಎಂ ಜಿ ರಾಮಚಂದ್ರನ್, ಶಿವಾಜಿ ಗಣೇಶನ್, ಎ ನಾಗೇಶ್ವರ ರಾವ್, ಎನ್ ಟಿ ರಾಮಾರಾವ್, ಜೆಮಿನಿ ಗಣೇಶ್, ರಾಜ್ ಕಪೂರ್, ಶಮ್ಮಿ ಕಪೂರ್, ದಿಲೀಪ್ ಕುಮಾರ್ ಅವರೊಂದಿಗೆ ಅಭಿನಯಿಸಿದ ಹೆಗ್ಗಳಿಕೆ ಸರೋಜಾ ದೇವಿ ಅವರದು.

    ಕೇವಲ ಅಭಿನಯಕ್ಕಷ್ಟೇ ಸೀಮಿತವಾಗದ ಸರೋಜಾ ದೇವಿ ಕರ್ನಾಟಕ ಚಲನಚಿತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆಯಾಗಿ, ಸೆನ್ಸಾರ್ ಮಂಡಳಿಯ ಸದಸ್ಯೆಯಾಗಿ, ಪನೋರಮಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮುಖ್ಯಸ್ಥರಾಗಿ, ರಾಜ್ಯ ಮತ್ತ್ತು ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಸಮಿತಿಯ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದರು. ಇಂತಹ ಅಪೂರ್ವ ನಟಿಯೊಂದಿಗೆ ಸಂವಾದದಲ್ಲಿ ಭಾಗವಹಿಸುವ ಅಪರೂಪದ ಅವಕಾಶವನ್ನು ಯಾರು ತಾನೆ ಮಿಸ್ ಮಾಡಿಕೊಳ್ಳುತ್ತಾರೆ!

    ಪದ್ಮಭೂಷಣ, ಪದ್ಮಶ್ರೀ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೂ ಬಿ ಸರೋಜಾ ದೇವಿ ಅವರು ಪಾತ್ರರಾಗಿದ್ದಾರೆ. ಕನ್ನಡ ಚಿತ್ರರಂಗದ ಭೀಷ್ಮ ಹೊನ್ನ್ನಪ್ಪ ಭಾಗವತ್ ಅವರ 'ಮಹಾಕವಿ ಕಾಳಿದಾಸ'(1955) ಚಿತ್ರದ ಮೂಲಕ ಕನ್ನಡ ಬೆಳ್ಳಿ ಪರದೆಗೆ ಸರೋಜಾ ದೇವಿ ಅವರು ಅಡಿಯಿಟ್ಟಿದ್ದರು. ಅರವತ್ತರ ದಶಕದಲ್ಲಿ ಅವರು ನಟಿಸಿದ ಚಿತ್ರಗಳು ಇಂದಿಗೂ ಪುಳಕಗೊಳಿಸುತ್ತವೆ.

    'ಕಿತ್ತೂರು ಚೆನ್ನಮ್ಮ' ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾದೇವಿ 'ಬಭ್ರುವಾಹನ' ಚಿತ್ರದಲ್ಲಿ ಚಿತ್ರಾಂಗದೆಯಾಗಿ ಪ್ರೇಕ್ಷಕರ ಮನಗೆದ್ದಿದ್ದರು. ಹೊಸ ಮತ್ತು ಹಳೆ ತಲೆಮಾರಿನ ಕಲಾವಿದರ ನಡುವಿನ ಕೊಂಡಿಯಾಗಿರುವ ಅಭಿನಯ ಸರಸ್ವತಿ, ಚತುರ್ಭಾಷಾ ತಾರೆಯೊಂದಿಗಿನ ಸಂವಾದಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣ ಸಜ್ಜಾಗಿದೆ.

    Tuesday, January 5, 2010, 15:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X