»   »  ಅಗ್ನಿ ಶ್ರೀಧರ್ ಅವರ ಹೊಸ ಚಿತ್ರ 'ಕಳ್ಳರ ಸಂತೆ'

ಅಗ್ನಿ ಶ್ರೀಧರ್ ಅವರ ಹೊಸ ಚಿತ್ರ 'ಕಳ್ಳರ ಸಂತೆ'

Posted By:
Subscribe to Filmibeat Kannada
ಅಗ್ನಿ ಶ್ರೀಧರ್ ಅವರ ಹೊಸ ಚಿತ್ರ 'ಕಳ್ಳರ ಸಂತೆ' ಸೆಟ್ಟೇರಿದೆ. ತಮ್ಮ ಹೊಸ ಚಿತ್ರದ ಬಗ್ಗೆ ವಿವರ ನೀಡಲು ಬೆಂಗಳೂರಿನ ತಮ್ಮ ಕಚೇರಿಗೆ ಸುದ್ದಿಗಾರರನ್ನು ಅಗ್ನಿ ಶ್ರೀಧರ್ ಸೋಮವಾರ ಆಹ್ವಾನಿಸಿದ್ದರು. ಮಟಮಟ ಮಧ್ಯಾಹ್ನ ಮೆಗಾ ಮೂವೀಸ್ ನ 'ಕಳ್ಳರ ಸಂತೆ' ಬಗ್ಗೆ ಒಂದೊಂದೆ ವಿವರಗಳನ್ನು ಬಿಚ್ಚಿಟ್ಟರು. ಇದೊಂದು ಕ್ಲಾಸ್ ಮತ್ತು ಮಾಸ್ ಚಿತ್ರ ಎಂದು ಅಗ್ನಿ ಶ್ರೀಧರ್ ಹೇಳಿದರು.

ಮಾಸ್ಟರ್ ಹಿರಣ್ಣಯ್ಯ ಮತ್ತು ಚೋ ರಾಮಸ್ವಾಮಿ ಅವರ ರಾಜಕೀಯ ವಿಡಂಬನೆಯನ್ನು ಇಂದಿನ ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದೇವೆ. ಸಮಾಜದ ಎಲ್ಲ ಪಾತ್ರಗಳನ್ನು ಚಿತ್ರದಲ್ಲಿ ಕಾಣಬಹುದು. ವಾರಪತ್ರಿಕೆಯೊಂದರ ಸಂಪಾದಕರು ಸಹ ಚಿತ್ರದ ಭಾಗವಾಗಿದ್ದಾರೆ ಎಂದು ಅವರು ವಿವರ ನೀಡಿದರು. ಚಿತ್ರದಲ್ಲಿ ವಿಧಾನ ಸೌಧವನ್ನು ಒಂದು ಸಂಕೇತವಾಗಿ ತೋರಿಸಲಿದ್ದೇವೆ. ಸುಮನಾ ಕಿತ್ತೂರು ಅವರ ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆ ಇದೆ. ಅವರು ಈ ಚಿತ್ರವನ್ನು ಅದ್ಭುತವಾಗಿ ತೆರೆಗೆ ತರುತ್ತಾರೆ ಎಂಬ ವಿಶ್ವಾವನ್ನು ಅಗ್ನಿ ಶ್ರೀಧರ್ ವ್ಯಕ್ತಪಡಿಸಿದರು.

ಇನ್ನು ಸುಮನಾ ಕಿತ್ತ್ತೂರು ಬಗ್ಗೆ ಹೇಳಬೇಕಾದರೆ, ಈ ಚಿತ್ರಕ್ಕಾಗಿ ಅವರು ಬಹಳಷ್ಟು ಶ್ರಮ ತೆಗೆದುಕೊಂಡಿದ್ದಾರೆ. ರಾಜಕಾರಣಿಗಳ ನಡವಳಿಕೆಯನ್ನು ಹತ್ತಿರದಿಂದ ಅಧ್ಯಯನ ಮಾಡಲು ಮೂರು ತಿಂಗಳು ಶ್ರಮಿಸಿದ್ದಾರೆ. ಕರ್ನಾಟಕದ ವಿವಿಧ ಭಾಗಗಳಲ್ಲಿ 60 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ವಿ.ಮನೋಹರ್ ಸಂಗೀತ ಸಂಯೋಜನೆಯ ನಾಲ್ಕು ಹಾಡುಗಳು ಚಿತ್ರದಲ್ಲಿವೆ. ಹಾಡುಗಳನ್ನು ಮಡಿಕೇರಿಯ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಕಳ್ಳರ ಸಂತೆಯನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಸುಮನಾ ತಲ್ಲೀನರಾಗಿದ್ದಾರೆ.

ಚಿತ್ರದ ನಾಯಕ್ ಯಶ್. ಕನ್ನಡ ಸಾಹಿತ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ಯಶ್ ಒಂಚೂರು ಸಂಕೋಚ ಸ್ವಭಾವದ ನಟ. ಜೀವನದ ಹಲವಾರು ಮಗ್ಗಲುಗಳನ್ನು ಚಿತ್ರದ ಪಾತ್ರ ಪರಿಚಯಿಸುತ್ತದೆ . ಹಾಗಾಗಿ ಕಳ್ಳರ ಸಂತೆಯನ್ನು ಒಪ್ಪಿಕೊಂಡೆ ಎನ್ನುತ್ತಾರೆ ಯಶ್. ಚಿತ್ರದ ನಾಯಕಿಯಾಗಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಸುಂದರನಾಥ್ ಸುವರ್ಣ ಅವರು 'ಕಳ್ಳರ ಸಂತೆ'ಯನ್ನು ತಮ್ಮ ಕ್ಯಾಮೆರಾದಲ್ಲಿ ಬಂಧಿಸಲಿದ್ದಾರೆ. ಈ ಚಿತ್ರ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಹುಟ್ಟಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಗ್ನಿ ಶ್ರೀಧರ್ ಮತ್ತು ಮಂಜುರಿಂದ ಪ್ರಶಸ್ತಿ ತಿರಸ್ಕಾರ
ಸ್ಲಂ ಬಾಲ: ಖಂಡಿತ ನೋಡಲೇ ಬೇಕಾದ ಚಿತ್ರ
ವಿಜಯ್ ಮತ್ತು ಶುಭಾ ನಡುವಿನ ಗಾಸಿಪ್ ನಿಜವೇ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada