»   »  ರಮ್ಯಾ ರಂಪಾಟದ ಬಗ್ಗೆ ಅಶ್ವಿನಿ ಕೊಟ್ಟ ವಿವರಣೆ

ರಮ್ಯಾ ರಂಪಾಟದ ಬಗ್ಗೆ ಅಶ್ವಿನಿ ಕೊಟ್ಟ ವಿವರಣೆ

Subscribe to Filmibeat Kannada
Ramya in Jothegara
''ಭಾನುವಾರ ಆಯೋಜಿಸಿದ್ದು ಪತ್ರಿಕಾಗೋಷ್ಠಿಯಲ್ಲ, ಅದೊಂದು ಅನೌಪಚಾರಿಕ ಸ್ನೇಹಕೂಟ'' ಎಂದು ಅಶ್ವಿನಿ ರಾಮ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ರಮ್ಯಾ ಅವರು ನನಗೆ ಕರೆ ಮಾಡಿ, ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಬಿಡುಗಡೆಗೂ ಮುನ್ನ ಒಂದು ಸ್ನೇಹಕೂಟ ಏರ್ಪಡಿಸೋಣ ಎಂದಿದ್ದರು. ಆದರೆ ಅದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ಎನ್ನುತ್ತಾರೆ ರಾಮ್ ಪ್ರಸಾದ್.

ತಮ್ಮ ಸಹ ನಟ ಪ್ರೇಮ್ ಕುಮಾರ್ ರನ್ನು ಸ್ನೇಹಕೂಟಕ್ಕೆ ಆಹ್ವಾನಿಸುವ ಜವಾಬ್ದಾರಿಯನ್ನೂ ರಮ್ಯಾ ತೆಗೆದುಕೊಂಡಿದ್ದರು. ಸ್ನೇಹಕೂಟದಲ್ಲಿ ಔತಣಕೂಟ ಇದ್ದರೆ ಚೆನ್ನಾಗಿರುತ್ತದೆ ಎಂದು ರಮ್ಯಾ ಹೇಳಿದ್ದರು. ಊಟಕ್ಕೂ ಮುಂಚೆ ಒಂದು ಸಣ್ಣ ಪತ್ರಿಕಾಗೋಷ್ಠಿಯೂ ಇರಲಿ ಎಂದು ನಾನು ಸಲಹೆ ಕೊಟ್ಟೆ. ಚಿತ್ರದ ಬಗ್ಗೆ ಒಂದೆರಡು ಮಾತನಾಡಲೂ ಹೇಳಿದ್ದೆ. ಹಾಗಾಗಿ ರಮ್ಯಾ ಬರುವಿಕೆಗಾಗಿ ನಾನು ಕಾದೆ.ಆದರೆ ರಮ್ಯಾ , ನಾನು ಬರುವುದು ಸ್ವಲ್ಪ ತಡವಾಗುತ್ತದೆ. ನೀವು ಮುಂದುವರಿಸಿ ಊಟಕ್ಕೆ ಬರುತ್ತೇನೆ ಎಂದು ತಿಳಿಸಿದ್ದರು.

ಆದರೆ ಅವರು ಬರುವಷ್ಟರಲ್ಲಿ ಇಡೀ ಸ್ನೇಹಕೂಟ ವಿವಾದಾತ್ಮಕವಾಗಿ ಪರಿಣಮಿಸಿತು. ಇದೊಂದು ಮಿಸ್ ಕಮ್ಯುನಿಕೇಷನ್ ಸಮಸ್ಯೆ. ದಯವಿಟ್ಟು ಇದೊಂದು ಗಿಮಿಕ್ ಎಂದು ಮಾತ್ರ ಅರ್ಥೈಸಿಕೊಳ್ಳಬೇಡಿ. ನಾನು ಈ ರೀತಿಯ ಸಣ್ಣಪುಟ್ಟ ಪ್ರಚಾರಕ್ಕೆ ಬೆಲೆ ಕೊಡುವುದಿಲ್ಲ. ಉತ್ತಮ ಚಿತ್ರವನ್ನು ನಿರ್ಮಿಸಬೇಕೆಂದು ಬಹಳಷ್ಟು ಶ್ರಮವಹಿಸಿದ್ದೇನೆ ಎಂದರು.

ಅಶ್ವಿನಿ ರಾಮ್ ಪ್ರಸಾದ್ ತಮ್ಮ ಮುಂದಿನ ಚಿತ್ರದ ಬಗ್ಗೆ ವಿವರನೀಡಿದರು. ಚಿತ್ರದ ಹೆಸರು 'ಪಡ್ಡೆ ಹುಡುಗ'. ಲೂಸ್ ಮಾದ ಖ್ಯಾತಿಯ ಯೋಗಿ ಚಿತ್ರದ ನಾಯಕ. ವರ್ಧನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ತಮಿಳಿನ ರವಿ ಚಕ್ರವರ್ತಿ ನಿರ್ದೇಶನ ಈ ಚಿತ್ರಕ್ಕಿರುತ್ತದೆ ಎಂದು ಅಶ್ವಿನಿ ರಾಮ್ ಪ್ರಸಾದ್ ತಿಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada