»   »  ರಾಜನ್ ಸ್ಟೂಡಿಯೋದಲ್ಲಿ ಕೋಮಲ್ ಚಿತ್ರ

ರಾಜನ್ ಸ್ಟೂಡಿಯೋದಲ್ಲಿ ಕೋಮಲ್ ಚಿತ್ರ

Subscribe to Filmibeat Kannada
special effects for chamkaysi chindi udaysi
ಕನ್ನಡ ಚಲನಚಿತ್ರಗಳಲ್ಲಿ ಹಾಸ್ಯಕ್ಕೆ ಅದರದೇ ಆದ ವಿಶೇಷ ಸ್ಥಾನವಿದೆ. ದಿವಂಗತರಾದ ನರಸಿಂಹರಾಜು, ಬಾಲಕೃಷ್ಣ, ದಿನೇಶ್ ಹೀಗೆ ಹಲವಾರು ಮಂದಿ ಹಾಸ್ಯ ಕಲಾವಿದರ ಅಮೋಘ ಅಭಿನಯ ಕನ್ನಡ ಚಿತ್ರಗಳ ಯಶಸ್ಸಿಗೆ ಕಾರಣವಾಗಿದೆ.

ಪ್ರಸ್ತುತ ತಮ್ಮ ಅಭಿನಯದಿಂದ ಅಭಿಮಾನಿಗಳ ಮುಖದಲ್ಲಿ ನಗೆಯುಕ್ಕಿಸುತ್ತಿರುವ ನಟ ಕೋಮಲ್. ಇವರು ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ 'ಚಂಕಾಯ್ಸಿ ಚಿಂದಿ ಉಡಾಯಿ' ಚಿತ್ರಕ್ಕೆ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ಪೂರ್ಣವಾದ ಮೇಲೆ, ರಾಜನ್ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ಹಾಗೂ ವಿಶೇಷ ತಂತ್ರಜ್ಞಾನ ಅಳವಡಿಕೆ ಆರಂಭವಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಹಾಸ್ಯ ಕಥಾನಕವನ್ನು ಎ.ಆರ್.ಬಾಬು ನಿರ್ದೇಶಿಸುತ್ತಿದ್ದಾರೆ.

ದತ್ತಾತ್ರೇಯ ಮೂವೀಸ್ ಲಾಂಛನದಲ್ಲಿ ಶ್ರೀಮತಿ ಅನಸೂಯ ಹಾಗೂ ಜೀವನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ 'ಮಸ್ತ್ ಮಜಾ ಮಾಡಿ' ಚಿತ್ರಕ್ಕೆ ಸಂಗೀತ ನೀಡಿದ ಬಾಲಾಜಿ ಸಂಗೀತ ಸಂಯೋಜಿಸುತ್ತಿದ್ದಾರೆ. ಅಶೋಕ್ ಕಶ್ಯಪ್ ಕ್ಯಾಮೆರಾ, ಪ್ರಕಾಶ್ ಸಂಕಲನ, ಡಿಫ಼ರೆಂಟ್ ಡ್ಯಾನಿ ಸಾಹಸ, ಶ್ರೀಧರ್ ಹಾಗೂ ವಿದ್ಯಾ ನೃತ್ಯ, ಅನಿಲ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಕೋಮಲ್ ಕುಮಾರ್, ರಾಹುಲ್, ಕಿರಣ್, ಗಿರಿ ದಿನೇಶ್, ನೇತಾನಿಯಾ, ನಿಧಿ ಸುಬ್ಬಯ್ಯ, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ಹೊನ್ನವಳ್ಳಿ ಕೃಷ್ಣ, ಪ್ರಮಿಳಾ ಜೋಷಾಯಿ, ಮಾರಿಮುತ್ತು, ಶ್ರೀನಿವಾಸ ಗೌಡ, ನಂದ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕೋಮಲ್ ಗೆ ನಾಯಕ ಪಟ್ಟ ಒಗ್ಗಲ್ಲ: ಸಾಧು
ನಿಧಿಯ ಹಿಂದೆ ಕೋಮಲ್ ಮತ್ತು ಗೆಳೆಯರು
ಕೋಮಲ್ ಜೊತೆಗಿನ ಸಿನಿಮಾಕ್ಕೆ ರಮ್ಯಾ ನಕಾರ?
ವಿದೇಶದಿಂದ ವಿದೇಶಕ್ಕೆ ಚಂಕಾಯ್ಸಿ ಚಿಂದಿ ಉಡಾಯ್ಸಿ'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada