For Quick Alerts
  ALLOW NOTIFICATIONS  
  For Daily Alerts

  ಸಂಕ್ರಾಂತಿಗೆ ಬಾಸ್ Vs ಕಂಠೀರವ ಮೆಗಾ ಫೈಟ್

  By Rajendra
  |

  ಒಟ್ಟೊಟ್ಟಿಗೆ ಎರಡು, ಮೂರು ಚಿತ್ರಗಳು ಬಿಡುಗಡೆ ಯಾಗುವುದು ಕನ್ನಡ ಚಿತ್ರರಂಗಕ್ಕೆ ಹೊಸದಲ್ಲ. 2010ರಲ್ಲಿ ಬಿಗ್, ಸ್ಮಾಲ್, ಮೀಡಿಯಂ ಬಜೆಟ್ ಚಿತ್ರಗಳು ಸೇರಿದಂತೆ ಹಲವಾರು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗಿ ಒಟ್ಟೊಟ್ಟ್ಟಿಗೆ ಎತ್ತಂಗಡಿಯಾಗಿದ್ದೂ ಉಂಟು. ಈ ಬಾರಿ ಸಂಕ್ರಾಂತಿಗೆ ಮತ್ತೆರಡು ಬಿಗ್ ಬಜಟ್ ಚಿತ್ರಗಳ ನಡುವೆ ಮೆಗಾ ಫೈಟ್ ನಡೆಯಲಿದೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಬಾಸ್' ಹಾಗೂ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅಭಿನಯದ'ಕಂಠೀರವ' ಚಿತ್ರಗಳು ಜ.14ರಂದು ತೆರೆಕಾಣಲಿವೆ. 'ಕಂಠೀರವ' ತೆಲುಗಿನ ಯಶಸ್ವಿ ಚಿತ್ರ 'ಸಿಂಹಾದ್ರಿ' ರೀಮೇಕ್. 'ಬಾಸ್' ಚಿತ್ರ ಸ್ವಮೇಕ್. ಪ್ರೇಕ್ಷಕರು ರಿಮೇಕ್‌ಗೆ ಜೈ ಅಂಥಾರೋ ಸ್ವಮೇಕ್‌ ಕಡೆಗೆ ವಾಲುತ್ತಾರೋ ಕಾದು ನೋಡಬೇಕು.

  "ಬಾಸ್ ಚಿತ್ರ ಅದ್ಭುತವಾಗಿ ಮೂಡಿಬಂದಿದ್ದು ಪ್ರೇಕ್ಷಕರಿಗೆ ಸಂಕ್ರಾಂತಿ ಉಡುಗೊರೆಯಾಗಿ ನೀಡುತ್ತಿದ್ದೇವೆ ಎಂದು ಚಿತ್ರದ ನಿರ್ಮಾಪಕ ರಮೇಶ್ ಯಾದವ್ ತಿಳಿಸಿದ್ದಾರೆ. ರಘುರಾಜ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಸರಿಸುಮಾರು ಎರಡು ವರ್ಷಗಳ ಬಳಿಕ ತೆರೆಬರುತ್ತಿರುವ ಕಾರಣ ಪ್ರೇಕ್ಷಕರಲ್ಲಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

  'ಕಂಠೀರವ' ಚಿತ್ರ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎಂದು ಪ್ರಕಟಿಸಲಾಗಿದೆ. ಆದರೆ ದಿನಾಂಕವನ್ನು ಪ್ರಕಟಿಸದ ಕಾರಣ ಜನವರಿ 14ರಂದೇ ತೆರೆಕಾಣುತ್ತದೆ ಎಂಬ ಗ್ಯಾರಂಟಿ ಇಲ್ಲ. ಚಿತ್ರಕ್ಕೆ ಸೆನ್ಸಾರ್ ಆದ ಬಳಿಕ ಬಿಡುಗಡೆ ದಿನಾಂಕ ಪ್ರಕಟಿಸುವುದಾಗಿ ತಿಳಿಸಲಾಗಿತ್ತು. ಕಂಠೀರವ ನಿಗೆ ಸೆನ್ಸಾರ್ 'ಎ' ಪ್ರಮಾಣ ಪತ್ರ ಸಿಕ್ಕಿದೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಒಂದು ವೇಳೆ ಜ.14ರಂದೇ ಬಿಡುಗಡೆಯಾದರೆ ಮೆಗಾ ಫೈಟ್ ತಪ್ಪಿದ್ದಲ್ಲ. [ರೀಮೇಕ್]

  English summary
  Two big budget Kannada movies Boss (Darshan) and Kanteerava (Duniya Vijay) will hit the screen on Jan 14. Kanteerava is the remake of Telugu hit Simhadri. Both are action oriented and great festive gift for audience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X