»   »  ಕನ್ನಡಕ್ಕೆ ಗುಂಗುರು ಕೂದಲ ಚೆಲುವೆ ಗೌರಿ!

ಕನ್ನಡಕ್ಕೆ ಗುಂಗುರು ಕೂದಲ ಚೆಲುವೆ ಗೌರಿ!

Subscribe to Filmibeat Kannada
Gauri Karnik
ಹಿಂದಿ ಚಿತ್ರರಂಗದ ಗುಂಗುರು ಕೂದಲ ಬೆಡಗಿ ಗೌರಿ ಕಾರ್ನಿಕ್ ಗೊತ್ತಲ್ಲಾ? 'ಸುರ್' ಎಂಬ ಹಿಂದಿ ಚಿತ್ರದಲ್ಲಿ ಪ್ರೇಕ್ಷಕರನ್ನು ಸೂರೆಗೊಂಡು ಕಾಣೆಯಾದ ನಾಯಕಿ. ಈಗ ಮತ್ತೆ ಕನ್ನಡದಲ್ಲಿ ಪ್ರತ್ಯಕ್ಷವಾಗಿದ್ದಾರೆ! ಈಕೆ ನಟಿಸಲಿರುವುದು ಕಾರಂಜಿ ಚಿತ್ರದಲ್ಲಿ. ಚಿತ್ರದ ಹೀರೊ ವಿಜಯ್ ರಾಘವೇಂದ್ರ.

ಲಕ್ಕಿ ಆಲಿಯೊಂದಿಗೆ ಈಕೆ ನಟಿಸಿದ್ದ ಸುರ್ ಚಿತ್ರ ಉತ್ತಮ ವಿಮರ್ಶೆಗೆ ಪಾತ್ರವಾಗಿತ್ತು. ಆ ಚಿತ್ರದ ನಂತರ ಆಕೆ ನಾಪತ್ತೆಯಾಗಿ ಬಿಟ್ಟಳು. ಇಷ್ಟು ದಿನ ಎಲ್ಲಿದ್ರಿ ಎಂದು ಕೇಳಿದ ಪತ್ರಕರ್ತರಿಗೆ ಆಕೆ ಉತ್ತರ ಕೇಳಿ ದಿಗ್ಭ್ರಮೆಯಾಗಿದೆ. ಆಕೆ ಲಂಡನ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರಂತೆ. ಓದು ಮುಗಿಯುತ್ತಿದ್ದಂತೆಯೇ ಬಣ್ಣದ ಲೋಕಕ್ಕೆ ಓಡಿಬಂದಿದ್ದಾರೆ.

ಐದು ಮಂದಿ ರಾಕ್ ಬ್ಯಾಂಡ್ ಹುಡುಗರ ಚಿತ್ರಕಥೆಯನ್ನು ಕಾರಂಜಿ ಒಳಗೊಂಡಿದೆ. ರಾಕ್ ಬ್ಯಾಂಡ್ ಹುಡುಗರ ತರಲೆ ತಾಪತ್ರಯಗಳು, ಏರಿಳಿತಗಳಲ್ಲಿ ಸಾಗುವ ಜೀವನ ಕಡೆಗೆ ಸೋಲಿನಿಂದ ಹೊರಬಂದು ಒಂದಾಗುವ ಕಥೆಯನ್ನು ತೆರೆಗೆ ತರುತ್ತಿದ್ದಾರೆ. ರಾಕ್ ಬ್ಯಾಂಡ್ ಸದಸ್ಯರಲ್ಲಿ ಗೌರಿ ಸಹ ಒಬ್ಬಳು. 'ಸುರ್' ಒಂದು ಸಂಗೀತ ಪ್ರಧಾನ ಚಿತ್ರವಾಗಿತ್ತು. ಅದೇ ರೀತಿಯಲ್ಲಿ 'ಕಾರಂಜಿ' ಸಹ ಸಂಗೀತ ಪ್ರಧಾನವಾಗುಳ್ಳ ಚಿತ್ರ. ಸ್ವತಃ ಉತ್ತಮ ಗಾಯಕಿಯೂ ಆಗಿರುವ ಗೌರಿ ಕಾರ್ನಿಕ್ ಕೆಲ ವರ್ಷಗಳಿಂದ ಹಿಂದೂಸ್ತಾನಿ ಸಂಗೀತ ಸಾಧನೆಯಲ್ಲಿ ತೊಡಾಗಿಕೊಂಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada