For Quick Alerts
  ALLOW NOTIFICATIONS  
  For Daily Alerts

  ಕ್ಯಾಬರೆ ನರ್ತಕಿ ಅಲ್ಫೋನ್ಸಾ ಆತ್ಮಹತ್ಯೆಗೆ ಯತ್ನ

  By Prasad
  |

  ಚೆನ್ನೈ, ಮಾ. 6 : ಕ್ಯಾಬರೆ ನರ್ತಕಿ ಮತ್ತು ನಟಿ ಅಲ್ಫೋನ್ಸಾ ಅವರು ಚೆನ್ನೈನ ವಿರುಗಂಪಕ್ಕಂನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಅವರ ಲಿವ್-ಇನ್-ಸಂಗಾತಿ ವಿನೋದ್ ಕುಮಾರ್ ಅವರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

  ನಿದ್ದೆ ಮಾತ್ರೆಗಳನ್ನು ನುಂಗಿ ಜೀವ ಕಳೆದುಕೊಳ್ಳಲು ಯತ್ನಿಸಿದ ಅಲ್ಫೋನ್ಸಾ ಅವರನ್ನು ವಡಪಳನಿ ವಿಜಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವುಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ನಟ ವಿನೋದ್ ಕುಮಾರ್ ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.

  ಜೊತೆಯಾಗಿ ವಾಸಿಸುತ್ತಿರುವ ಇಬ್ಬರಲ್ಲೂ ಸೋಮವಾರ ಸಂಜೆ ಜಗಳ ಶುರುವಾಗಿದೆ. ಇಬ್ಬರೂ ಒಟ್ಟಿಗೆ ಜೀವಿಸುತ್ತಿದ್ದರೂ ಮದುವೆಯಾಗಿರಲಿಲ್ಲ. ಮದುವೆಯಾಗಬೇಕೆಂದು ವಿನೋದ್ ಅಲ್ಫೋನ್ಸಾಳನ್ನು ಆಗ್ರಹಿಸುತ್ತಿದ್ದ. ಈ ಕಾರಣದಿಂದಾಗಿ ಆರಂಭವಾದ ಕಲಹ ದುರಂತದಲ್ಲಿ ಮುಕ್ತಾಯವಾಗಿದೆ.

  ಆಗ ತಾನೆ ಡಾನ್ಸ್ ಕಾರ್ಯಕ್ರಮ ನೀಡಿ ದುಬೈನಿಂದ ವಾಪಸ್ ಬಂದಿದ್ದ ಅಲ್ಫೋನ್ಸಾ ಮದುವೆಯ ಪ್ರಸ್ತಾವನೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡದಿದ್ದರಿಂದ ನೊಂದ ವಿನೋದ್ ನೇಣಿಗೆ ಶರಣಾಗಿದ್ದಾರೆ. ಇದಕ್ಕೆಲ್ಲ ಅಲ್ಪೋನ್ಸಾಳೇ ಕಾರಣಳೆಂದು ವಿನೋದ್ ಕುಟುಂಬದವರು ಆಕೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಬೇಸತ್ತ ಅಲ್ಫೋನ್ಸಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕ್ಯಾಬರೆ ನರ್ತಕಿಯರ ಲೈಫು ಇಷ್ಟೇನಾ?

  English summary
  Item dancer Alphonsa has attempted suicide in Chennai on March 5 at her residence. Her live-in-partner Vinod Kumar too attempted to commit suicide by hanging. He later died in the hospital. Vinod was pestering her to marry him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X