»   » ಮತ್ತಷ್ಟು ಸೆಕ್ಸಿಯಾಗಿ ಕಾಣಲು ನಮಿತಾ ಪಣ

ಮತ್ತಷ್ಟು ಸೆಕ್ಸಿಯಾಗಿ ಕಾಣಲು ನಮಿತಾ ಪಣ

Posted By: Staff
Subscribe to Filmibeat Kannada

ಸಿನಿತಾರೆಯರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಮಪ್ರಚೋದಕ ದಿರಿಸುಗಳಲ್ಲಿ ಬರುತ್ತಿರುವ ಬಗ್ಗೆ ಇಡೀ ತಮಿಳುನಾಡು ವಿಧಾನಸಭೆ ಬೊಬ್ಬೆ ಹೊಡೆಯುತ್ತಿದ್ದರೆ ನಮಗೂ ಅದಕ್ಕೂ ಸಂಬಂಧವೇ ಇಲ್ಲವೆಂತಿರುವ ತಾರಾಮಣಿಗಳು ಮತ್ತಷ್ಟು ಪ್ರಚೋದನಾತ್ಮಕ ಬಟ್ಟೆ ಧರಿಸಿ ಬಿಂದಾಸ್ ಆಗಿ ಅಡ್ಡಾಡುತ್ತಿದ್ದಾರೆ. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ!

ಎಂಎಲ್ಎಗಳ ಕೆಂಗಣ್ಣಿಗೆ ಗುರಿಯಾಗಿದ್ದ ಸೆಕ್ಸಿ ತಾರೆ ನಮಿತಾಳೇ ಮುಯ್ಯಿಗೆ ಮುಯ್ಯಿ ಎಂಬಂತೆ ಮತ್ತಷ್ಟು ಸೆಕ್ಸಿಯಾಗಿ ಚಿತ್ರಗಳಲ್ಲಿ ಮಾತ್ರವಲ್ಲ ಸಾರ್ವಜನಿಕ ಸ್ಥಳಗಳಲ್ಲಿಯೂ ಕಾಣಿಸಿಕೊಳ್ಳಲು ಪಣ ತೊಟ್ಟಿದ್ದಾರೆ. ಅದನ್ನು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಕಾರ್ಯರೂಪಕ್ಕೂ ತಂದಿದ್ದಾರೆ.

ಮೊನ್ನೆ ಭಾನುವಾರ ಚೆನ್ನೈನಲ್ಲಿ ನಡೆದ ಕೇಶತೈಲ ಬಿಡುಗಡೆಯ ಖಾಸಗಿ ಸಮಾರಂಭದಲ್ಲಿ ಮೈಯನ್ನು ಬಿಗ್ಗಬಿಗಿಯಾಗಿ ತಬ್ಬಿಕೊಂಡ ಹಳದಿ ಬಣ್ಣದ ಬಟ್ಟೆ ಧರಿಸಿಕೊಂಡು ಬಂದು ನೆರೆದಿದ್ದ ರಸಿಕರಿಗೆ ಮಾತ್ರವಲ್ಲ ಕಾರ್ಯಕ್ರಮದ ಆಯೋಜಕರೂ ಅವಾಕ್ಕಾಗುವಂತೆ ಮಾಡಿದ್ದಾರೆ. ಸಭಿಕರೆಲ್ಲಾ ಒಂದು ಕ್ಷಣ ಉಸಿರಾಡುವುದನ್ನೂ ನಿಲ್ಲಿಸುವಂತೆ ನಮಿತಾ ಉಡುಪಿ ಧರಿಸಿದ್ದರು.

ನಮಿತಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಂದಿನ ಚಿತ್ರವೊಂದರಲ್ಲಿ ಹಿಂದೆಂದೂ ಕಂಡಿರದಂಥ ಸೆಕ್ಸಿ ಉಡುಪಿನಲ್ಲಿ ಕಾಣಿಸಿಕೊಳ್ಳಲು ನಿರ್ಧಸಿರಿದ್ದಾರೆ. ರಾಜೇಶ್ವರ್ ಎಂಬ ನಿರ್ದೇಶಕರ ಚಿತ್ರದಲ್ಲಿ ಪ್ರಥಮ ಬಾರಿಗೆ ಬಿಕಿನಿಯಲ್ಲಿ ನಮಿತಾ ನಟಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸ್ಪರ್ಧೆ ಯಾವಮಟ್ಟಕ್ಕೆ ಇಳಿದಿದೆಯೆಂದರೆ ಸಭ್ಯಾತಿಸಭ್ಯ ನಟಿಯೆಂದೇ ಕರೆಸಿಕೊಂಡಿದ್ದ ನಯನತಾರಾ ಬಿಲ್ಲಾ ಚಿತ್ರದಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡು ಚಿತ್ರರಸಿಕರ ಮೈಬೆಚ್ಚಗಾಗುವಂತೆ ಮಾಡಿದ್ದಾರೆ.

ನಯನತಾರಾನೇ ಟೂಪೀಸ್ ಧರಿಸಿದ ಮೇಲೆ ನಮಿತಾ ಕೇಳಬೇಕೆ? ನಯನತಾರಾ ಬಿಲ್ಲಾ ಚಿತ್ರದಲ್ಲಿ ಹುಟ್ಟಿಸಿದ ಕ್ರೇಜ್ ನಮಿತಾ ಈ ನಿರ್ಧಾರಕ್ಕೆ ಬರಲು ಪ್ರೇರೇಪಿಸಿದೆ.
ಅಭಿಮಾನಿಗಳ ಹುಚ್ಚು ಪ್ರೀತಿಗೆ ಬೆಚ್ಚಿಬಿದ್ದಳು ನಮಿತಾ!

Read more about: kannada, karnataka, kannada news, namitha
English summary
Namitha to appear in bikini in her forthcoming tamil movie. It is said that is inspired by the bikini scenes of Nayantara in Ajith Starrer Billa movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada