»   »  ಅಭಿಮಾನ್‌ನಲ್ಲಿ ಪ್ರೀತಿಯ ಹಂಗಾಮ

ಅಭಿಮಾನ್‌ನಲ್ಲಿ ಪ್ರೀತಿಯ ಹಂಗಾಮ

Posted By:
Subscribe to Filmibeat Kannada

ನಿವಾಸಿನಿ ಆರ್ಟ್ಸ್ ಲಾಂಛನದಲ್ಲಿ ಪುಷ್ಪಾ ಹಾಗೂ ರಶ್ಮಿಏಕನಾಥ್ ಅವರು ನಿರ್ಮಿಸುತ್ತಿರುವ 'ಪ್ರೀತಿಯ ಹಂಗಾಮ' ಚಿತ್ರಕ್ಕೆ ಅಭಿಮಾನ್ ಸ್ಟೂಡಿಯೋದಲ್ಲಿ ಹಾಡಿನ ಚಿತ್ರೀಕರಣ ನೆರವೇರಿದೆ.
ಯುವ ಸಾಹಿತಿ ಕವಿರಾಜ್ ಬರೆದಿರುವ 'ಹಿಂಸೆ ಹಿಂಸೆನೋ - ಹುಡುಗರು ಭಾರಿ ಹಿಂಸೆನೋ- ಹುಡುಗರು ಹತ್ತಿರ ಬಂದರೆ ನಮ್ಮ ಲೈಫೇ ಧ್ವಂಸಾನೋ' ಎಂಬ ಗೀತೆ ನಾಯಕ ವಿವೇಕ್ ಹಾಗೂ ನಾಯಕಿ ಶುಭಾಪುಂಜಾ ಅವರ ಅಭಿನಯದಲ್ಲಿ ಮೂಡಿಬಂದಿದೆ.

ಕಲಾ ನಿರ್ದೇಶಕ ಮೋಹನ್ ಪಂಡಿತ್ ನಿರ್ಮಿಸಿದ ವಿಭಿನ್ನ ಸೆಟ್‌ನಲ್ಲಿ ಚಿತ್ರೀಕರಣಗೊಂಡ ಈ ಹಾಡಿಗೆ ಮದನ್ ಹರಿಣಿ ನೃತ್ಯ ಸಂಯೋಜಿಸಿದ್ದಾರೆ. ಮುಕ್ಕಾಲು ಭಾಗದ ಚಿತ್ರೀಕರಣ ಮುಗಿದಿರುವ ಈ ಚಿತ್ರಕ್ಕೆ ಮೂರು ಹಾಡುಗಳ ಚಿತ್ರೀಕರಣ ಬಾಕಿಯಿದೆ ಎಂದು ಚಿತ್ರದ ನಾಯಕನೂ ಆಗಿರುವ ನಿರ್ದೇಶಕ ವಿವೇಕ್ ತಿಳಿಸಿದ್ದಾರೆ.

ರಾಜ್‌ಕಿರಣ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಚಂದ್ರಶೇಖರ್ ಛಾಯಾಗ್ರಹಣವಿದೆ. ಮದನ್-ಹರಿಣಿ ನೃತ್ಯ, ಎಂ.ಎಸ್.ರಮೇಶ್ ಹಾಗೂ ಆರ್.ರಾಜಶೇಖರ್ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿವೇಕ್‌ರಾಜ್, ಶುಭಾಪುಂಜಾ, ಅವಿನಾಶ್, ಊರ್ವಶಿ, ನಂದ, ಪ್ರಕಾಶ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada