»   » ಐ ಲವ್ ಯು ಅಂದ್ರೆ ಹುಡುಗಿ ಕಪಾಳಕ್ಕೆ ಬಿಗೀದೆ ಇರ್ತಾಳಾ

ಐ ಲವ್ ಯು ಅಂದ್ರೆ ಹುಡುಗಿ ಕಪಾಳಕ್ಕೆ ಬಿಗೀದೆ ಇರ್ತಾಳಾ

Posted By:
Subscribe to Filmibeat Kannada

ಪ್ರೇಮ ಚಂದ್ರಮ ನಾಯಕನಿಗೆ ಕಪಾಳ ಮೋಕ್ಷ ವಾಗಿದೆ! ಇದು ನಿಮಗೆ ಗೊತ್ತುಂಟೆ ಮಾರಾರ್ಯೆ? ಕತೆ ಹೀಗುಂಟು ಓದಿ. ನಾಯಕನಿಗೆ ನಾಯಕಿಯ ಮೇಲೆ ಪ್ರೀತಿ ಹುಟ್ಟಿದ ಸಮಯ. ಈ ವಿಷಯವನ್ನು ಆಕೆಗೆ ಬಹಳ ದಿನದಿಂದ ಹೇಳಿಬೇಕೆಂದು ಕೊಂಡಿದ್ದ ಆತ ಸೂಕ್ತ ಸಮಯ ನೋಡಿ ವಿಷಯ ಪ್ರಸ್ತಾಪಿಸುತ್ತಾನೆ.

ಆದರೆ ನಾಯಕಿ ಸುಮ್ಮನಿರಲು ಸಾಧ್ಯವೆ? ನಾಯಕನ ಮಾತಿನಿಂದ ಕೋಪಗೊಂಡ ನಾಯಕಿ ಕಪಾಳಕ್ಕೆ ಹೊಡೆದು, ವೃತ್ತಿಯಲ್ಲಿ ವೈದ್ಯನಾಗಿರುವ ನೀನು ಕಂಡಕಂಡ ಹೆಣ್ಣುಮಕ್ಕಳಿಗೆ ಈ ರೀತಿ ಹೇಳುವುದು ಸರಿಯಲ್ಲ ಎಂದು ಹೇಳಿ ಹೋಗುತ್ತಾಳೆ.

ಈ ಸನ್ನಿವೇಶವನ್ನು 'ಪ್ರೇಮಚಂದ್ರಮ' ಚಿತ್ರಕ್ಕಾಗಿ ನಿರ್ದೇಶಕ ಶಾಹುರಾಜ್ ಶಿಂಧೆ ಇತ್ತೀಚೆಗೆ ಸಕಲೇಶಪುರದಲ್ಲಿ ಚಿತ್ರಿಸಿಕೊಂಡರು. ಕಿರಣ್ ಹಾಗೂ ರೇಖಾ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಜೇನುಕಲ್ಲು ಚಿತ್ರಾಲಯ ಲಾಂಛನದಲ್ಲಿ ಯು.ಇ.ಗಣೇಶ್, ಜಿ.ಕುಮಾರ್, ಜಿ.ಎಸ್.ಜಗದೀಶ್ ಹಾಗೂ ಸುನೀಲ್‌ಕುಮಾರ್‌ ಶಿಂಧೆ ನಿರ್ಮಿಸುತ್ತಿರುವ ಚಿತ್ರ.

'ಪ್ರೇಮ ಚಂದ್ರಮ' ಚಿತ್ರಕ್ಕೆ ಸಕಲೇಶಪುರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಸಕಲೇಶಪುರದಲ್ಲಿ ಸುರಿಯುತ್ತಿರುವ ಮಳೆಯಲ್ಲೂ ನಮ್ಮ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಸಾಗಿದೆ ಎಂದು ತಿಳಿಸಿರುವ ನಿರ್ದೇಶಕರು ಕಾಗಿನೆಲೆ ಮುಂತಾದ ಸ್ಥಳಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ ಎನ್ನುತ್ತಾರೆ.

ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ರವರ ಛಾಯಾಗ್ರಹಣವಿದೆ. ಶಶಿಧರ್‌ಭಟ್(ಶಿರಸಿ) ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿರ್ಮರ ಸಾಹಸವಿರುವ 'ಪ್ರೇಮ ಚಂದ್ರಮ' ಚಿತ್ರದ ತಾರಾಬಳಗದಲ್ಲಿ ರಘುಮುಖರ್ಜಿ, ಕಿರಣ್(ಹಾಗೆ ಸುಮ್ಮನೆ), ರೇಖಾ, ಶ್ರೀನಾಥ್, ಉಮಾಶ್ರೀ, ಸುಮಿತ್ರ, ಯು.ಇ.ಗಣೇಶ್ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada