»   » ರಾಗಿಣಿ ದ್ವಿವೇದಿಗೆ ಅಮಿತಾಬ್ ಜೊತೆ ನಟಿಸುವ ಛಾನ್ಸ್

ರಾಗಿಣಿ ದ್ವಿವೇದಿಗೆ ಅಮಿತಾಬ್ ಜೊತೆ ನಟಿಸುವ ಛಾನ್ಸ್

Posted By:
Subscribe to Filmibeat Kannada

ಕಿಚ್ಚ ಸುದೀಪ್ ಜೊತೆ ಈ ಶತಮಾನದ ವೀರ ಮದಕರಿ ಚಿತ್ರದಲ್ಲಿ ನಟಿಸಿದ್ದ ರಾಗಿಣಿಗೆ ಸಖತ್ ಛಾನ್ಸ್ ಸಿಕ್ಕಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸುವ ಅವಕಾಶ ರಾಗಿಣಿ ದ್ವಿವೇದಿ ಅವರನ್ನು ಹುಡುಕಿಕೊಂಡು ಬಂದಿದೆ. ಬಿಗ್ ಬಿ ಜೊತೆ ನಟಿಸಬೇಕು ಎಂದು ಹಲವಾರು ಕಲಾವಿದರು ಕನಸು ಕಾಣುತ್ತಿರುತ್ತಾರೆ. ರಾಗಿಣಿ ವಿಚಾರದಲ್ಲಿ ಈ ಕನಸು ಬಹಳ ಬೇಗನೆ ನನಸಾಗಿದೆ.

ಮಲಯಾಳಂನ 'ಕಾಂದಹಾರ್' ಚಿತ್ರದಲ್ಲಿ ಅಮಿತಾಬ್ ರ ಮಗಳಾಗಿ ರಾಗಿಣಿ ಕಾಣಿಸಲಿದ್ದಾರೆ. ಅಮಿತಾಬ್ ಪಕ್ಕ ನಿಂತಾಗ ನನಗೆ ಮಾತೆ ಹೊರಡದಷ್ಟು ಸಂತಸವಾಗಿತ್ತು ಎನ್ನುತ್ತಾರೆ ರಾಗಿಣಿ. ಚಿತ್ರದಲ್ಲಿ ಅಮಿತಾಬ್ ಜೊತೆ ಮೋಹನ್ ಲಾಲ್ ಸಹ ಅಭಿನಯಿಸುತ್ತಿದ್ದಾರೆ. ಇಂತಹ ನಟ ದಿಗ್ಗಜರ ಜೊತೆ ನಟಿಸುತ್ತಿರುವುದಕ್ಕೆ ತುಂಬಾನೆ ಖುಷಿಯಾಗಿದೆ ಎಂದು ರಾಗಿಣಿ ತಿಳಿಸಿದ್ದಾರೆ.

ಒಂದೇ ವರ್ಷದಲ್ಲಿ ಆರು ಕನ್ನಡ ಹಾಗೂ ಒಂದು ತಮಿಳು ಚಿತ್ರಗದಲ್ಲಿ ನಟಿಸಿದ್ದೇನೆ. ಸದ್ಯಕ್ಕೆ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತಲಾ ಒಂದೊಂದು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಬ್ರೇಕ್ ತೆಗೆದುಕೊಂಡು ನಟಿಸುವುದರಲ್ಲಿ ನನಗೆ ನಂಬಿಕೆಯಿಲ್ಲ ಎನ್ನುತ್ತಾರೆ ರಾಗಿಣಿ. ಚಿರಂಜೀವಿ ಸರ್ಜಾ ಜೊತೆ 'ಗಂಡೆದೆ' ಚಿತ್ರದಲ್ಲಿ ರಾಗಿಣಿ ಅಭಿನಯಿಸುತ್ತಿದ್ದಾರೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X