twitter
    For Quick Alerts
    ALLOW NOTIFICATIONS  
    For Daily Alerts

    'ರಾಮರಾಮ ರಘುರಾಮ' ಏನಪ್ಪಾ ಇದೆಲ್ಲಾ!?

    By Rajendra
    |

    ಆರ್.ರಘುರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ 'ರಾಮರಾಮ ರಘುರಾಮ' ಚಿತ್ರ ಪರಿಶುದ್ಧ ಮನೋರಂಜನೆಯನ್ನೊಳಗೊಂಡ ಕೌಟುಂಬಿಕ ಚಿತ್ರವಾಗಿದೆ. ಮೈಸೂರು ಸುತ್ತಮುತ್ತ, ಬ್ಯಾಂಕಾಕ್ ಹಾಗೂ ಚೈನಾ ಗಡಿ ಭಾಗದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

    'ಬೆಳದಿಂಗಳಾಗಿ ಬಾ' ಹಾಗೂ 'ತಾಕತ್' ಚಿತ್ರಗಳು ಹಿಂದೆ ಈ ನಿರ್ಮಾಪಕರಿಂದ ನಿರ್ಮಾಣವಾಗಿತ್ತು. 'ರಾಮರಾಮ ರಘುರಾಮ' ಚಿತ್ರ ನೋಡುಗರ ಪ್ರಶಂಸೆಗೆ ಪಾತ್ರವಾಗಲಿದೆ ಎಂಬ ಅಭಿಪ್ರಾಯ ನಿರ್ಮಾಪಕರದು. ಜಯಣ್ಣ ಕಂಬೈನ್ಸ್ ಅರ್ಪಿಸುವ, ಮಯ ಮೂವೀಸ್ ಲಾಂಛನದಲ್ಲಿ ಜಿ.ಎನ್.ರಾಜಶೇಖರನಾಯ್ಡು ಹಾಗೂ ಬಿ.ವಿ.ಪ್ರಮೋದ್ ನಿರ್ಮಿಸುತ್ತಿರುವ 'ರಾಮರಾಮ ರಘುರಾಮ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ.

    ದೊಡ್ಡಣ್ಣ, ರಂಗಾಯಣರಘು, ಸಾಧುಕೋಕಿಲಾ, ಲಕ್ಷ್ಮೀಶರ್ಮ, ಶೋಭರಾಜ್, ಲೋಕನಾಥ್, ಅರುಣ್‌ಸಾಗರ್ ಮುಂತಾದ ಅನುಭವಿ ಕಲಾವಿದರ ತಾರಾಬಳಗ ಈ ಚಿತ್ರಕ್ಕಿದೆ. 'ಡಕೋಟ ಎಕ್ಸ್‌ಪ್ರೆಸ್' ಚಿತ್ರದ ನಂತರ ನನಗೆ ಈ ಸಿನಿಮಾದ ಪಾತ್ರ ಮೆಚ್ಚುಗೆಯಾಗಿದೆ ಎನ್ನುತ್ತಾರೆ ಹಿರಿಯ ಕಲಾವಿದ ದೊಡ್ಡಣ್ಣ.

    ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಕೆ.ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಪಿ.ಆರ್.ಸೌಂದರ್‌ರಾಜ್ ಸಂಕಲನ, ಶಂಕರ್ ನೃತ್ಯ ನಿರ್ದೇಶನ, ಪಳನಿರಾಜ್ ಸಾಹಸ ನಿರ್ದೇಶನ, ಆನಂದ್-ಪ್ರಸನ್ನ ಕಲಾ ನಿರ್ದೇಶನ ಹಾಗೂ ಅನಿಲ್‌ಕುಮಾರ್ ನಿರ್ಮಾಣ ನಿರ್ವಹಣೆಯಿರುವ 'ರಾಮರಾಮ ರಘುರಾಮ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಗ್ರಾಫಿಕ್ ಕೂಡ ಬಹಳ ಸುಂದರವಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

    English summary
    Rangayana Raghu, Doddanna, Sadhu Kokila lead movie "Ramarama Raghurama" is a wholesome entertainer. This movie is directing by R Raghu Raj and produced by G N Rajashekar Naidu. At present DTS work of the movie has been progress at Balaji digital studio.
    Monday, December 6, 2010, 17:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X