»   »  ತೆಲುಗಿನ 'ಶೌರ್ಯಂ' ಕನ್ನಡಕ್ಕೆ ರಿಮೇಕ್

ತೆಲುಗಿನ 'ಶೌರ್ಯಂ' ಕನ್ನಡಕ್ಕೆ ರಿಮೇಕ್

Posted By:
Subscribe to Filmibeat Kannada

ತೆಲುಗಿನ ಯಶಸ್ವಿ 'ಶೌರ್ಯಂ' ಚಿತ್ರದ ಕನ್ನಡ ಅವತರಿಣಿಕೆಯಲ್ಲಿ ದರ್ಶನ್ ತೂಗುದೀಪ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸಾಧುಕೋಕಿಲ ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ ಶೌರ್ಯ, ಭದ್ರ ಅಂತ ಹೆಸರಿಡಲು ಚಿಂತಿಸಲಾಗಿದೆ.ಆದರೆ ಚಿತ್ರದ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ.

ತೆಲುಗು ನಟ ಗೋಪಿಚಂದ್ ಅಭಿನಯಿಸಿದ್ದ 'ಶೌರ್ಯಂ' ಚಿತ್ರ ಆಂಧ್ರಪ್ರದೇಶದಲ್ಲಿ ಜಯಭೇರಿ ಬಾರಿಸಿತ್ತು. ಆ ಚಿತ್ರದಲ್ಲಿದ್ದ ಸಿದ್ಧ ಸೂತ್ರಗಳನ್ನು ಗಮನಿಸಿದರೆ ದರ್ಶನ್ ಇಮೇಜ್ ಗೆ ಹೇಳಿ ಮಾಡಿಸಿದಂತ ಚಿತ್ರ. ಪ್ರಜ್ವಲ್ ದೇವರಾಜ್ ಅಭಿನಯಿಸಿದ್ದ 'ಗೆಳೆಯ ' ಚಿತ್ರ ಮಾಡಿ ಕೈ ಸುಟ್ಟುಕೊಂಡಿದ್ದ ಪಂಚ ಪಾಂಡವರಂತಿರುವ ಗೆಳೆಯರು ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ.

ಚಿತ್ರದಲ್ಲಿ ದರ್ಶನ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಲಿದ್ದಾರೆ. ತಂಗಿ ಸೆಂಟಿಮೆಂಟ್ ಸಹ ಚಿತ್ರದಲ್ಲಿ ಹೇರಳವಾಗಿದೆಯಂತೆ. ತಂಗಿ ಪಾತ್ರದ ಆಯ್ಕೆ ಪ್ರಕ್ರಿಯೆ ಸಹ ನಡೆಯುತ್ತಿದೆ. ಸದ್ಯಕ್ಕೆ ನಾಯಕಿ ಮತ್ತು ತಂಗಿ ಪಾತ್ರದ ಆಯ್ಕೆಯಲ್ಲಿ ಸಾಧು ಕೋಕಿಲ ತಲ್ಲೀನರಾಗಿದ್ದಾರೆ. ಚಿತ್ರಗಂಗಾಧರ್, ವೆಂಕಟೇಶ್, ಬಸವರಾಜ್ ಮತ್ತು ಇಬ್ಬರು ಗೆಳೆಯರು ಸೇರಿ ಈ ಚಿತ್ರ ನಿರ್ಮಿಸಲಿದ್ದಾರೆ. ಚಿತ್ರದ ಉಳಿದ ತಾರಾಗಣ ಇನ್ನೂ ಅಂತಿಮ ಗೊಂಡಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada