»   »  ರೀಮೇಕ್ ಚಿತ್ರಗಳಿಗೆ ಲೂಸ್ ಮಾದ ಗುಡ್ ಬೈ!

ರೀಮೇಕ್ ಚಿತ್ರಗಳಿಗೆ ಲೂಸ್ ಮಾದ ಗುಡ್ ಬೈ!

Subscribe to Filmibeat Kannada

ಲೂಸ್ ಮಾದ ಅಲಿಯಾಸ್ ಯೋಗೀಶ್ 18 ವರ್ಷಗಳನ್ನು ದಾಟಿ 19ಕ್ಕೆ ಅಡಿಯಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬ ಸಂದರ್ಭದಲ್ಲಿ ಇನ್ನು ಮುಂದೆ ರೀಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಯೋಗಿ ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ! 'ಕನ್ನಡದ ಧನುಷ್' ಮತ್ತು 'ರೀಮೇಕ್ ಹೀರೋ' ಎಂಬ ಹಣೆಪಟ್ಟಿಯನ್ನು ಕಿತ್ತೊಗೆಯಲು ಯೋಗಿ ತೀರ್ಮಾನಿಸಿದ್ದಾರೆ!

ತಮಿಳಿನ 'ಕಾದಲ್ ಕೋಂಡೇನ್' ಮತ್ತು 'ಪೊಲ್ಲದವನ್' ಚಿತ್ರಗಳ ರೀಮೇಕ್ 'ರಾವಣ' ಮತ್ತು 'ಪುಂಡ'. ಈ ಚಿತ್ರಗಳಲ್ಲಿ ಯೋಗೀಶ್ ನಾಯಕ ನಟ. 'ಧೂಳ್' ಎಂಬ ಮತ್ತೊಂದು ರೀಮೇಕ್ ಚಿತ್ರದಲ್ಲೂ ನಟಿಸಲಿದ್ದಾರೆ. ಇದು ಸಹ ತಮಿಳಿನ ರೀಮೇಕ್ ಚಿತ್ರ. ಈ ಎಲ್ಲ ಮೂಲ ಚಿತ್ರಗಳ ನಾಯಕ ನಟ ತಮಿಳಿನ ಧನುಷ್.

''ಈಗಾಗಲೇ ನಾನು ಮೂರು ರೀಮೇಕ್ ಚಿತ್ರಗಳಲ್ಲಿ ನಟಿಸಿದ್ದೀನಿ. ಇನ್ನೊಂದು ರೀಮೇಕ್ ಚಿತ್ರ ಒಪ್ಪಿಕೊಂಡರೆ 'ರೀಮೇಕ್ ಕಿಂಗ್' ಎಂಬ ಹಣೆಪಟ್ಟಿ ಅಂಟಿಸಿಬಿಡುತ್ತಾರೆ. ಹಾಗಾಗಿ ಈಗಿರುವ ರೀಮೇಕ್ ಚಿತ್ರಗಳೇ ಸಾಕು. ಮುಂದೆ ರೀಮೇಕ್ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ'' ಎಂದು ಯೋಗೀಶ್ ತಿಳಿಸಿದ್ದಾರೆ.

ದುನಿಯಾ ಚಿತ್ರದಲ್ಲಿ ತನಗೊಂದು ಬ್ರೇಕ್ ನೀಡಿದ ನಿರ್ದೇಶಕ ಸೂರಿಯನ್ನು ಮರೆಯುವುದಿಲ್ಲ ಎಂದು ನೆನಸಿಕೊಳ್ಳುತ್ತಾರೆ. ಇಷ್ಟೆಲ್ಲಾ ಒಳ್ಳೆಯ ಅವಕಾಶಗಳು ಕೈಲಿದ್ದರೂ ಯೋಗಿಗೆ ಇನ್ನ್ನೂ ನನಸಾಗದ ಕನಸೊಂದು ಇದೆಯಂತೆ. ತಮ್ಮ ನೆಚ್ಚಿನ ನಟಿ ರಮ್ಯಾ ಜತೆಗೆ ನಟಿಸಬೇಕು ಎಂಬುದು. ನನ್ನ ಮೊಬೈಲ್ ಫೋನ್ ನಲ್ಲಿ ಸಹ ರಮ್ಯಾ ಚಿತ್ರ ಇದೆ. ಆಕೆಯೊಂದಿಗೆ ನಟಿಸಬೇಕು ಎಂಬುದು ಬಹಳ ದಿನಗಳ ಕೋರಿಕೆ ಎನ್ನುತ್ತಾರೆ ಯೋಗಿ.

ರಮ್ಯಾ ಮತ್ತು ಯೋಗೀಶ್ ಅಕ್ಕ್ಕತಮ್ಮ ನಂತೆ ಕಾಣಿಸುತ್ತಾರೆ. ಹಾಗಾಗಿ ನೀವಿಬ್ಬರೂ ಒಟ್ಟಿಗೆ ನಟಿಸುವ ಸೌಭಾಗ್ಯ ಇಲ್ಲ ಎನ್ನುತ್ತಿದ್ದಾರೆ ಎಂದರೆ. ಒಂದು ಸಲ ಅವಕಾಶ ಕೊಟ್ಟಿ ನೋಡಿದರೆ ತಾನೆ ಗೊತ್ತ್ತಾಗುವುದು. ಸುಮ್ಮನೆ ನಿಮ್ಮಷ್ಟಕ್ಕೆ ನೀವೆ ಕಲ್ಪಿಸಿಕೊಂಡರೆ ಹೇಗೆ ಎಂದು ಮರುಪ್ರಶ್ನೆ ಎಸೆಯುತ್ತಾರೆ ಯೋಗೀಶ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada