»   » ಟೀವಿಯಲ್ಲಿ ‘ರಮ್ಯ’ ಪ್ರಭೆ!

ಟೀವಿಯಲ್ಲಿ ‘ರಮ್ಯ’ ಪ್ರಭೆ!

Posted By: Super
Subscribe to Filmibeat Kannada

ತುಂಡುತುಂಡು ಬಟ್ಟೆ ಧರಿಸಿ, ಪ್ರೇಕ್ಷಕರ ನಿದ್ದೆ ಕೆಡಿಸುವ ತಾರಾಮಣಿಗಳು ನಂತರ ಮಾಡೋದೇನು? -ಒಂದು ಮದುವೆಯಾಗ್ತಾರೆ! ಇನ್ನೊಂದು ಅಮ್ಮ ಆಗ್ತಾರೆ! ಆಮೇಲೆ ಟೀವಿ ಸೀರಿಯಲ್‌ಗಳಲ್ಲಿ ಮುಖ ತೋರಿಸುತ್ತಾರೆ!

ಈ ಪಟ್ಟಿಗೆ 'ಬಾ ಬಾರೋ ರಸಿಕ" ಎಂದು ಪಡ್ಡೆಗಳ ಕೆಣಕಿದ್ದ ರಮ್ಯಕೃಷ್ಣ ಮೇಡಂ ಈಗ ಹೊಸ ಸೇರ್ಪಡೆ!

ದಕ್ಷಿಣ ಭಾರತೀಯ ಭಾಷೆಗಳಲ್ಲಿ ಬಹುಬೇಡಿಕೆಯ(ಜನ ಬಯಸುವ ನಟಿ ಎಂದುಕೊಳ್ಳಿ) ನಟಿ ಎನಿಸಿಕೊಂಡಿದ್ದ ರಮ್ಯಕೃಷ್ಣ, ನಿರ್ದೇಶಕ ಕೃಷ್ಣ ವಂಶಿ ಅವರನ್ನು ಮದುವೆಯಾದ ನಂತರ ಸಂಸಾರಿಕ ಜೀವನದಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಬಣ್ಣ ಹಚ್ಚುವ ಅವಕಾಶ ಸಿಕ್ಕಿರಲಿಲ್ಲ.

ರಮ್ಯಕೃಷ್ಣ ಈಗ ಗಂಡು ಮಗುವೊಂದರ ತಾಯಿ. ಮಗು ಜನಿಸಿದ ನಂತರ ನಟನೆ ಸಾಧ್ಯವಾಗುತ್ತಿಲ್ಲ. ಆದರೆ ಸನ್‌ ಟೀವಿಗಾಗಿ ರಸಪ್ರಶ್ನೆ ಸಹಿತ ಗೇಮ್‌ ಶೋ ಒಂದನ್ನು ನಿರ್ವಹಿಸಲು ಅವರು ಮುಂದಾಗಿದ್ದಾರೆ.

ಈ ಕಾರ್ಯಕ್ರಮ ನವೆಂಬರ್‌ ತಿಂಗಳಲ್ಲೇ ಆರಂಭವಾಗಲಿದ್ದು, ಪ್ರತಿ ಶನಿವಾರ ರಾತ್ರಿ 9ರಿಂದ 10ಗಂಟೆಯವರೆಗೆ ಪ್ರಸಾರವಾಗಲಿದೆ.

ರಮ್ಯ ಎಂಬ ಮಿಂಚಿನ ಬಳ್ಳಿ ಸ್ಯಾಂಡಲ್‌ವುಡ್‌ನಲ್ಲಿ ಬಳುಕಿದ ಪರಿ ಅನನ್ಯ. ರಮ್ಯ ಜೊತೆಯಲ್ಲಿ ಸಿನಿಮಾ ಪ್ರಪಂಚಕ್ಕೆಬಂದ ನಟಿಯರೆಲ್ಲ ತಾಯಿಯ ಪಾತ್ರಕ್ಕೆ ತಳ್ಳಲ್ಪಟ್ಟರೂ, ಆಕೆ ಮಾತ್ರ ನಾಯಕಿ ಸ್ಥಾನವನ್ನು ಕಾಯಂ ಆಗಿ ಉಳಿಸಿಕೊಂಡಿದ್ದರು. ಈಗಲೂ ಆಕೆ ಒಪ್ಪಿದರೆ, ತಮ್ಮ ಚಿತ್ರಕ್ಕೆ ರವಿಚಂದ್ರನ್‌ ಆಹ್ವಾನಿಸುತ್ತಾರೆ ಎಂಬುದು ಗಾಂಧಿನಗರದ ಕುಹಕ.

ಟೀವಿಯ ಕ್ವಿಜ್‌ಗೇಮ್‌ ಶೋನಲ್ಲೂ ಕೂಡ ರಮ್ಯ ಅವರ ಗ್ಲ್ಯಾಮರ್‌ಗೆ ವೀಕ್ಷಕರು ಬೋಲ್ಡ್‌ ಆಗಲಿ ಎಂಬುದು ಸನ್‌ ಟೀವಿಯವರ ಬಯಕೆ.

Read more about: kannada karnataka ramya krishna
English summary
Ramya Krishna has decided to host a quiz cum game show titled Thanga Vettai. This is to be telecast in Sun TV.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada