For Quick Alerts
  ALLOW NOTIFICATIONS  
  For Daily Alerts

  ಶ್ರೀನಗರ ಕಿಟ್ಟಿ ಜೊತೆ ಕೋ ಕೋ ಆಡಲಿದ್ದಾರೆ ಪ್ರಿಯಾಮಣಿ

  By Rajendra
  |

  ಬೆಂಗಳೂರು ಬಾಲೆ ಪ್ರಿಯಾಮಣಿ ಮತ್ತೊಂದು ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಬಾರಿ ಆಕೆ ಶ್ರೀನಗರ ಕಿಟ್ಟಿ ಜೊತೆ ಕೋ.. ಕೋ.. ಆಡಲಿದ್ದಾರೆ. ಅಂದರೆ ಚಿತ್ರದ ಹೆಸರೇ ಕೋ..ಕೋ.. ಮೈಲಾರಿ ಚಂದ್ರು ನಿರ್ದೇಶನದ ಚಿತ್ರ. ತನಗೆ ರಾಷ್ಟ್ರ ಪ್ರಶಸ್ತಿ ದೊರಕಿಸಿಕೊಟ್ಟ 'ಪರುತ್ತಿವೀರನ್' ಚಿತ್ರದ ಛಾಯೆ 'ಕೋ ಕೋ'ದಲ್ಲೂ ಇದೆಯಂತೆ. ಹಾಗಾಗಿ ಈ ಚಿತ್ರವನ್ನು ಒಪ್ಪಿಕೊಂಡೆ ಎಂದಿದ್ದಾರೆ ಪ್ರಿಯಾಮಣಿ.

  ಭರಣಿ ಮಿನರಲ್ಸ್ ಬ್ಯಾನರಿನಡಿ ಭಾಸ್ಕರ್ ಹಾಗೂ ಆದಿ ನಿರ್ಮಿಸುತ್ತಿರುವ ಚಿತ್ರವಿದು. ಇವರದೇ ಮತ್ತೊಂದು ಚಿತ್ರ 'ಲಕ್ಷ್ಮಿ'ಯಲ್ಲೂ ಶಿವರಾಜ್ ಕುಮಾರ್ ಜೊತೆ ಪ್ರಿಯಾಮಣಿ ಅಭಿನಯಿಸುತ್ತಿದ್ದಾರೆ. 'ಕೋ ಕೋ' ಚಿತ್ರಕ್ಕಾಗಿ ಎರಡು ತಿಂಗಳ ಅನ್ವೇಷಣೆ ಬಳಿಕ ಪ್ರಿಯಾಮಣಿಗೆ ಅವಕಾಶ ಕೊಟ್ಟಿರುವುದಾಗಿ ಚಂದ್ರು ಹೇಳಿದ್ದಾರೆ.

  ಕತೆ ಕೇಳಿದ ಕೂಡಲೆ ಇಂಪ್ರೆಸ್ ಆಗಿ ಕಾಲ್ ಶೀಟ್ ಕೊಟ್ಟ ಬಗ್ಗೆ ಚಂದ್ರುಗೆ ಸಖತ್ ಖುಷಿಯಾಗಿದೆಯಂತೆ. ರಮಣ ಗೋಗುಲ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಹಾಡುಗಳ ಸಂಯೋಜನೆ ಭರದಿಂದ ಸಾಗುತ್ತಿದೆ. ಅಂದಹಾಗೆ 'ಕೋ ಕೋ' ಅಂದರೆ ಕೋಳಿ ಕೋತಿ ಎನ್ನುತ್ತದೆ ಚಿತ್ರದ ಅಡಿಬರಹ! ಚಿತ್ರದಲ್ಲಿ ಯಾರು ಕೋತಿಯೋ ಯಾರು ಕೋಳಿಯೋ ಎಂಬುದನ್ನು ಕಾದುನೋಡಬೇಕು! (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Actress Priyamani has recently signed to star in another Kannada movie title Ko... Ko..., which is being directed by Mylari fame R Chandru. The South Indian star says that she accepted the movie because its subject remembered her of Paruthiveeran.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X