For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿ 8ರಂದು 'ಜಾಕಿ' ಶತದಿನೋತ್ಸವ ಸಂಭ್ರಮ

  By Rajendra
  |

  ಪುನೀತ್ ರಾಜ್ ಕುಮಾರ್ ಹಾಗೂ ಮಲ್ಲು ಬೆಡಗಿ ಭಾವನಾ ಅಭಿನಯದ 'ಜಾಕಿ' ಚಿತ್ರ ಶತದಿನೋತ್ಸವ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಸಜ್ಜಾಗಿದೆ. ಫೆಬ್ರವರಿ 8ರಂದು ಮಲ್ಲೇಶ್ವರಂನ ಚೌಡಯ್ಯ ಸ್ಮಾರಕ ಭವನದಲ್ಲಿ 'ಜಾಕಿ' ನೂರು ದಿನಗಳ ಸಂಭ್ರಮ ನಡೆಯಲಿದೆ.

  'ಜಾಕಿ' ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ಪರಭಾಷಾ ಚಿತ್ರಗಳಿಗೆ ಸಡ್ಡು ಹೊಡೆದು ಪಿವಿಆರ್ ಮತ್ತು ಐನಾಕ್ಸ್ ಚಿತ್ರಮಂದಿರಗಳಲ್ಲೂ ಶತಕ ಬಾರಿಸಿರುವುದು ವಿಶೇಷ. ಶತದಿನೋತ್ಸವ ಸಂಭ್ರಮಕ್ಕೆ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಕೂಡ ಆಗಮಿಸಲಿದ್ದಾರೆ.

  'ಜಾಕಿ' ಚಿತ್ರದ ಪ್ರಮುಖ ಆಕರ್ಷಣೆ ಹಾಡುಗಳು. ಕತೆ, ಚಿತ್ರಕತೆ ಹಾಗೂ ಸೂರಿ ಅಚ್ಚುಕಟ್ಟಾದ ನಿರ್ದೇಶನ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. 'ಜಾಕಿ' ಚಿತ್ರದ ಹಾಡುಗಳು ಈಗಲೂ ಟಾಪ್ ಟೆನ್‌ನಲ್ಲಿ ಸ್ಥಾನಪಡೆದಿವೆ ಎಂದರೆ ಅದರ ಜನಪ್ರಿಯತೆಯನ್ನು ನೀವೇ ಊಹಿಸಿ.

  English summary
  Kannada movie Jackie celebrates 100 days function in Chowdaiah Memorial Hall in Malleswaram Bangalore on Feb 8, 2011. Puneeth Rajakumar, Bhavana, Rangayana Raghu, Ravi Kaale Jackie has been extra ordinary for the superb songs. This is the most successful movie of Sri Vajreshwari Combines of Dr.Rajkumar family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X