»   »  ಕುಲು ಮನಾಲಿಗೆ ಮೋಡ ಕವಿದ ಮಂಜು

ಕುಲು ಮನಾಲಿಗೆ ಮೋಡ ಕವಿದ ಮಂಜು

Subscribe to Filmibeat Kannada

ಎಂ.ಸಿ. ಪ್ರೋಡಕ್ಷನ್ಸ್ ಲಾಂಛನದಲ್ಲಿ ನಟ ರಘುವೀರ್ ನಿರ್ಮಾಣದ 'ಯೋರಿಗೋಸ್ಕರ ಈ ಪ್ರೀತಿ' ಚಿತ್ರದ ಶೀರ್ಷಿಕೆ ಈಗ 'ಮೋಡ ಕವಿದ ಮಂಜು' ಎಂದು ಬದಲಾಗಿದೆ. ಜೊತೆಗೆ ನಿರ್ದೇಶಕರೂ ಬದಲಾಗಿದ್ದಾರೆ. ಈ ಸಂಭಾಷಣೆ ಚಿತ್ರ ನಿರ್ದೇಶಿಸಿದ್ದ ರಾಜಶೇಖರ್ ನಿರ್ದೇಶನ ಮಾಡುತ್ತಿದ್ದು, ಜುಲೈ 11ರಿಂದ 2 ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ಕುಲು-ಮನಾಲಿಗೆ ಪ್ರಯಾಣ ಬೆಳೆಸಲಿದೆ.

ಪೂರಿ ಜಗನ್ನಾಥ್ ಅವರ ಶಿಷ್ಯ ಶ್ರವಣ್ ರಾಜ್ ಅವರ ಕಥೆಗೆ ರಘುವೀರ್ ಹಾಗೂ ರಾಜಶೇಖರ್ ಸೇರಿ ಚಿತ್ರಕಥೆ ಮಾಡಿದ್ದಾರೆ. ಜೊತೆಗೆ ಇನ್ನೊಂದು ಪ್ರಮುಖ ಪಾತ್ರ ಸೇರ್ಪಡೆಯಾಗಿದೆ. ನಾಯಕ ರಘುವೀರ್ ಸ್ನೇಹಿತನಾಗಿ ಈ ಸಂಭಾಷಣೆಯ ನಾಯಕ ಸಂದೇಶ್ ಅಭಿನಯಿಸುತ್ತಿದ್ದಾರೆ. ಛಾಯಾಗ್ರಾಹಕರಾಗಿ ಬಿ.ಎಲ್. ಬಾಬು ಕಾರ್ಯನಿರ್ವಹಿಸಲಿದ್ದಾರೆ.

ಕಳೆದ 22ರಂದು ರಘುವೀರ್ ಎಸ್ಟೇಟ್‌ನಲ್ಲಿ ಮುಹೂರ್ತ ಪೂಜೆ ನಡೆದಿದೆ. ಚಿತ್ರದ ಹಾಡುಗಳಿಗೆ ರಘುವೀರ್ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಬಿ.ಎನ್. ಸಾಗರ್ ಅವರ ಸಾಹಿತ್ಯ, ಶಿವಪ್ರಕಾಶ್ ಸಂಕಲನ, ಟೈಗರ್ ಮಧು ಅವರ ಸಾಹಸ-ಸಂಯೋಜನೆ, ತ್ರಿಭುವನ್ ಸತೀಶ್ ನೃತ್ಯ ಸಂಯೋಜನೆ ಇದ್ದು, ಸ್ವಾತಿ ಎಂಬ ಹೊಸಹುಡುಗಿ ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾಳೆ. ಅಶೋಕ್ ರಾವ್, ರಾಮಕೃಷ್ಣ, ಟೆನ್ನಿಸ್ ಕೃಷ್ಣ, ವಿಜಯಕಾಶಿ, ಶ್ರೀಲಲಿತಾ, ಅರ್ಜುನ್, ಸಿಬಿನ್, ಉಳಿದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada