ದುನಿಯಾ ಲೂಸ್ ಮಾದ ಈಗ ದೇವದಾಸ

ಯೋಗೇಶ್ ಒಪ್ಪಿಕೊಳ್ಳುತ್ತಿರುವ ಚಿತ್ರಗಳ ಸಂಖ್ಯೆ ಹನುಮಂತನ ಬಾಲದ ಹಾಗೆ ಬೆಳೆಯತೊಡಗಿದೆ. ಪುಂಡ, ಪಡ್ಡೆ ಹುಡುಗ, ತಮಿಳಿನ ತಿರುವಿಳೈಯಾಡಲ್ ಆರಂಭಂ ಚಿತ್ರದ ರಿಮೇಕ್ ಗಳ ಮಧ್ಯೆ ಇನ್ನೊಂದು ಚಿತ್ರಕ್ಕೆ ಯೋಗಿ ಒಪ್ಪಿಕೊಂಡಿರುವ ಸುದ್ದಿ ಗಾಂಧಿನಗರದಲ್ಲಿ ಕೇಳಿ ಬರತೊಡಗಿದೆ. ಅದರ ಹೆಸರು 'ದೇವದಾಸ್' ಎಂದು ಹೆಸರಿಡಲಾಗಿದೆ.
ಒಬ್ಬ ಪುಂಡ, ಪಡ್ಡೆ ಹುಡುಗನಾಗಿ ದೇವದಾಸವಾಗುವ ಕತೆ ಇರಬಹುದು. ದೇವದಾಸ್ ಚಿತ್ರವನ್ನು ಶಾಂತಕುಮಾರ್ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಕತೆ, ಚಿತ್ರಕತೆ ಎಲ್ಲವೂ ಅವರದ್ದೇ. ಈ ಹಿಂದೆ ಫ್ರೇಂಡ್ಸ್ ಚಿತ್ರದ ಇನ್ನೊಂದು ಭಾಗವಾದ ಬ್ಯಾಂಕಾಕ್ ನಲ್ಲಿ ಫ್ರೆಂಡ್ಸ್ ಎಂಬ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಆದರೆ, ಫ್ರೆಂಡ್ಸ್ ಬ್ಯಾಂಕಾಕ್ ಗೆ ಹೋದ ಮೇಲೆ ಏನಾಯ್ತಿ ಅಂತ ಗೊತ್ತಾಗಲಿಲ್ಲ. ಆ ಚಿತ್ರ ಅಂತಿಮ ಹಂತದಲ್ಲಿರುವಾಗಲೇ ಶಾಂತಕುಮಾರ್ ನಿಶ್ಚಿಂತೆಯಿಂದ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ದೇವದಾಸನ ಪಾರೂ ಅಥವಾ ಚಂದ್ರಮುಖಿ ಯಾರಾಗಬಹುದು ಎನ್ನುವುದು ಶಾಂತಕುಮಾರ್ ಸಸ್ಪೆನ್ಸ್ ನಲ್ಲಿ ಇಟ್ಟಿದ್ದಾರೆ. ಈ ಮಧ್ಯೆ ಯೋಗಿ 14 ಲಕ್ಷ ರುಪಾಯಿ ವೆಚ್ಚದ ಯಮಹಾ ಹಯಾಬುಸಾ ಬೈಕ್ ನ್ನು ಖರೀದಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಜೂನ್ 11ರಿಂದ ಯೋಗೀಶ್ ಪುಂಡ
ಎಲ್ಲ ಯೋಗೀಶನ ಮಹಿಮೆ, ಶತಕದತ್ತ ಅಂಬಾರಿ
ಕನ್ನಡಕ್ಕೆ ಪುಂಡನಾಗಿ ತಮಿಳಿನ ಪೊಲ್ಲದವನ್


Click it and Unblock the Notifications











