»   » ಚಿತ್ರನಟಿ ರಂಭಾ ಮದುವೆಗೆ ಮುಕ್ತ ಆಹ್ವಾನ

ಚಿತ್ರನಟಿ ರಂಭಾ ಮದುವೆಗೆ ಮುಕ್ತ ಆಹ್ವಾನ

Posted By:
Subscribe to Filmibeat Kannada

ಖ್ಯಾತ ತಾರೆ ರಂಭಾ ಮದುವೆ ಮುಹೂರ್ತಕ್ಕೆ ಕ್ಷಣಗಣನೆ ಆರಂಭವಾಗಿದೆ! ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಏಪ್ರಿಲ್ 8ರ ಗುರುವಾರ ರಂಭಾ ಹಸೆಮಣೆ ಏರಲಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ಶುಭಮುಹೂರ್ತದಲ್ಲಿ ಸಪ್ತಪದಿ ತುಳಿದು ದಾಂಪತ್ಯಕ್ಕೆ ಅಡಿಯಿಡಲಿದ್ದಾರೆ ರಂಭಾ.

ತಮ್ಮ ಮದುವೆಗೆ ರಂಭಾ ಎಲ್ಲರನ್ನ್ನು ಮುಕ್ತವಾಗಿ ಆಹ್ವಾನಿಸಿದ್ದಾರೆ. ಮದುವೆ ಆಮಂತ್ರಣ ತಲುಪದವರಿಗೆ ವಿಡಿಯೋ ಮೂಲಕ ತಮ್ಮ ಮದುವೆಗೆ ತಪ್ಪದೆ ಬರಬೇಕು ಎಂದು ರಂಭಾ ಕೇಳಿಕೊಂಡಿದ್ದಾರೆ. ಸಾಧ್ಯವಾದರೆ ರಂಭಾ ಮದುವೆಗೆ ಶುಭ ಕೋರುವವರು ಇಂದು ರಾತ್ರಿ (ಏ.7)ತಿರುಪತಿ ಬಸ್ ಹತ್ತಬಹುದು!

ಇಷ್ಟಕ್ಕೂ ರಂಭಾ ಕೈಹಿಡಿಯಲಿರುವುದು ಕೆನಡ ಮೂಲದ ಉದ್ಯಮಿ ಇಂದಿರನ್ ಪದ್ಮನಾಭಂ ಅವರನ್ನು. ಮದುವೆ ಆರತಕ್ಷತೆ ಕಾರ್ಯಕ್ರಮ ಏಪ್ರಿಲ್ 11ರಂದು ಚೆನ್ನ್ನೈ ನಗರದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಜನವರಿ 27ರಂದು ಚೆನ್ನೈನ ಹೋಟೆಲ್ ಗ್ರ್ಯಾಂಡ್ ಶೆರಟಾನ್ ನಲ್ಲಿ ರಂಭಾ ನಿಶ್ಚಿತಾರ್ಥ ಸಹ ಅದ್ದೂರಿಯಾಗಿ ನಡೆದಿತ್ತು.

ರಂಭಾ ಮೂಲ ಹೆಸರು ವಿಜಯ ಲಕ್ಷ್ಮಿ. ಬೆಳ್ಳಿತೆರೆಗೆ ಅಡಿಯಿಟ್ಟ ಬಳಿಕ ಹೆಸರು ರಂಭಾ ಎಂದಾಯಿತು. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬಂಗಾಳಿ ಮತ್ತು ಭೋಜ್ ಪುರಿ ಭಾಷೆಗಳಲ್ಲಿ ನಟಿಸಿದ ಖ್ಯಾತಿ ರಂಭಾ ಅವರದು. ಮದುವೆ ಬಳಿಕವೂ ಚಿತ್ರಗಳಲ್ಲಿ ನಟಿಸುವುದಾಗಿ ರಂಭಾ ತಿಳಿಸಿದ್ದಾರೆ.

ವಿಡಿಯೋ: ಚಿತ್ರನಟಿ ರಂಭಾ ಮದುವೆಗೆ ಮುಕ್ತ ಆಹ್ವಾನ

ಕನ್ನಡದಲ್ಲಿ ಅನಾಥರು, ಸಾಹುಕಾರ, ಗಂಡುಗಲಿ ಕುಮಾರರಾಮ, ಪಾಂಡುರಂಗ ವಿಠಲ, ಭಾವ ಭಾಮೈದ, ಓ ಪ್ರೇಮವೆ, ಸರ್ವರ್ ಸೋಮಣ್ಣ ಚಿತ್ರಗಳಲ್ಲಿ ರಂಭಾ ಅಭಿನಯಿಸಿದ್ದಾರೆ. ಸದ್ಯಕ್ಕೆ ನಾವು ನೀವು ಮಾಡಬೇಕಾದ ಕೆಲಸ ಎಂದರೆ...ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಎಂದು ಹಾರೈಸೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada