»   »  'ಕಾಫಿ ಶಾಪ್' ನಲ್ಲಿ ಗಿರೀಶ್ ಕಾರ್ನಾಡ್

'ಕಾಫಿ ಶಾಪ್' ನಲ್ಲಿ ಗಿರೀಶ್ ಕಾರ್ನಾಡ್

Posted By:
Subscribe to Filmibeat Kannada

ಬ್ಲೂ ಫಾಕ್ಸ್ ಸಿನಿಮಾ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಕಾಫಿ ಶಾಪ್' ಚಿತ್ರಕ್ಕೆ ನಗರದ ಪ್ರಸಾದ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ನಡೆಯುತ್ತಿದೆ ಎಂದು ನಿರ್ದೇಶಕ ಗೀತಾಕೃಷ್ಣ ತಿಳಿಸಿದ್ದಾರೆ. ಹೈದರಾಬಾದ್ ಸೇರಿದಂತೆ ಹಲವು ಸುಪ್ರಸಿದ್ದ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

ನಿರ್ದೇಶನದ ಸಾರಥ್ಯ ವಹಿಸಿರುವ ಗೀತಾಕೃಷ್ಣ ಚಿತ್ರದ ನಿರ್ಮಾಪಕರು ಹೌದು. 'ಕಾಫಿ ಶಾಪ್' ಗೆ ಕಥೆ, ಚಿತ್ರಕಥೆ, ಸಂಗೀತ ಹಾಗೂ ಸಂಭಾಷಣೆಯ ಕೊಡುಗೆಯೂ ಇವರದೆ. ಹಿಂದೆ 'ಸಂಕೀರ್ತನ', 'ಕೋಕಿಲಾ', 'ಪ್ರಿಯತಮ ' ಹಾಗೂ 'ಸರ್ವರ್ ಸುಂದರಂಗಾರು' ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ ಗೀತಾಕೃಷ್ಣ ಅವರು 'ಸಂಕೀರ್ತನ' ಚಿತ್ರಕ್ಕಾಗಿ ಪ್ರತಿಷ್ಠಿತ ನಂದಿ ಪ್ರಶಸ್ತಿ ಪಡೆದವರು.

ಶಶಾಂಕ್ ಹಾಗೂ ಬಿಯಾಂಕ ದೇಸಾಯಿ ನಾಯಕ,ನಾಯಕಿಯರಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಅವರು ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದ ಛಾಯಾಗ್ರಾಹಕ ಮುರುಳಿ ರಘು. ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ತರಬೇತಿ ಪಡೆದಿರುವ ಇವರು ಭಾರತ ಚಿತ್ರರಂಗದಲ್ಲೇ ಪ್ರಥಮ ಬಾರಿಗೆ ರೆಡ್ 1ಕ್ಯಾಮೆರಾವನ್ನು 'ಕಾಫಿ ಶಾಪ್' ಚಿತ್ರಕ್ಕಾಗಿ ಬಳಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada