'ಭೀಮಾ ತೀರದಲ್ಲಿ' ನಿರ್ಮಾಪಕ ಅಣಜಿಗೆ ಬೆದರಿಕೆ ಕರೆ

ಚಲನಚಿತ್ರ ನಿರ್ಮಾಪಕ ಅಣಜಿ ನಾಗರಾಜ್ ಅವರಿಗೆ ಶೇಷಪ್ಪನ ಪುತ್ರನ ಹೆಸರಿನಲ್ಲಿ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಣಜಿ ಇನ್ನೂ ಪೊಲೀಸ್ ದೂರು ನೀಡಿಲ್ಲ. ಕರೆ ಮಾಡಿರುವವರು ಅಣಜಿ ಬಳಿ 15 ರಿಂದ 20 ನಿಮಿಷ ಮಾತನಾಡಿದ್ದಾರೆ. ಚಿತ್ರದಲ್ಲಿ ಕೇಶವ ಎಂಬ ಹೆಸರನ್ನು ಬಳಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿನ ಕೇಶವ್ ಎಂಬ ಹೆಸರನ್ನು ಕೈಬಿಡುವಂತೆ ಕರೆ ಮಾಡಿರುವವರು ಬೆದರಿಕೆ ಹಾಕಿದ್ದಾಗಿ ಅಣಜಿ ತಿಳಿಸಿದ್ದಾರೆ. ಆ ಹೆಸರನ್ನು ಚಿತ್ರದಲ್ಲಿ ಬಳಸಿಕೊಳ್ಳುವ ಮುನ್ನ ತಮ್ಮನ್ನು ಸಂಪರ್ಕಿಸಬೇಕಾಗಿತ್ತು ಎಂದು ಕರೆಯಲ್ಲಿ ಹೇಳಿದ್ದಾಗಿ ಅಣಜಿ ತಿಳಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Bheema Theeradalli producer Anaji Nagaraj has received some threatening calls from an unknown person as a result to which she has decides to lodged a police complaint.
ದುನಿಯಾ ವಿಜಯ್ ಓಂ ಪ್ರಕಾಶ್ ರಾವ್ ಅಣಜಿ ನಾಗರಾಜ್ ಪ್ರಣೀತಾ duniya vijay om prakash rao anaji nagaraj praneetha


Click it and Unblock the Notifications











