»   »  ಅಂತೂ ಇಂತೂ ಅರ್ಧ ಶತಕ ಪೂರೈಸಿದ ವೆಂಕಟ!

ಅಂತೂ ಇಂತೂ ಅರ್ಧ ಶತಕ ಪೂರೈಸಿದ ವೆಂಕಟ!

Posted By:
Subscribe to Filmibeat Kannada

ರಮೇಶ್ ಅರವಿಂದ ನಟಿಸಿ ನಿರ್ದೇಶಿಸಿದ್ದ ವೆಂಕಟ ಇನ್ ಸಂಕಟ ಚಿತ್ರ ಅರ್ಧ ಶತಕ ಪೂರೈಸಿದೆ. ಚಿತ್ರದ ನಿರ್ಮಾಪಕ ನಗೇಶ್ ಮಗಲಾನಿ ಸಂತಸದಲ್ಲಿದ್ದಾರೆ. ಆಕ್ಸಿಡೆಂಟ್ ನಂತರ ರಮೇಶ್ ಮರಳಿ ಹಾಸ್ಯಚಿತ್ರವನ್ನು ಕೈಗೆತ್ತಿಕೊಂಡು ವೆಂಕಟ ಇನ್ ಸಂಕಟ ನಿರ್ದೇಶಿಸಿದ್ದರು.

ರಮೇಶ್‌ಅರವಿಂದ್, ಶರ್ಮಿಳಾಮಾಂಡ್ರೆ, ಮೇಘನ ಮುಡಿಯನ್, ಅನುಶಾ, ಮುಖ್ಯಮಂತ್ರಿ ಚಂದ್ರು, ದೇವದಾಸ್ ಕಪ್ಪಿಕಡ್, ಎಂ.ಎಸ್.ಉಮೇಶ್ ತಾರಾಬಳಗವನ್ನು ಹೊಂದಿರುವ ಚಿತ್ರ ಏಪ್ರಿಲ್ 10ಕ್ಕೆ ಅರ್ಧ ಶತಕ ಪೂರೈಸಿದೆ. ರಾಮ ಶಾಮ ಭಾಮ ಮತ್ತು ಸತ್ಯವಾನ್ ಸಾವಿತ್ರಿ ಖುಷಿ ರಮೇಶ್ ಮುಖದಲ್ಲಿ ಮರುಕಳುಹಿಸಿದೆ.

ಬೆಂಗಳೂರಿನ ತ್ರಿವೇಣಿ, ಇನಾಕ್ಸ್ ಮತ್ತು ಪಿವಿಆರ್ ಚಿತ್ರಮಂದಿರಗಳಲ್ಲಿ ವೆಂಕಟ ಇನ್ ಸಂಕಟ 50ದಿನಗಳ ಪ್ರದರ್ಶನ ಕಂಡಿದೆ. ಆಕ್ಷನ್ ನಿಂದ ಕಾಮಿಡಿ ಜಾಡು ಹಿಡಿದ ರಮೇಶ್ ಮತ್ತೊಮ್ಮೆ ಗೆದ್ದಿದ್ದಾರೆ. ರಮೇಶ್ ಮತ್ತು ಅವರ ತಂಡಕ್ಕೆ ಶುಭಕಾಮನೆಗಳು!

(ದಟ್ಸ್ ಕನ್ನಡ ಚಿತ್ರವಾರ್ತೆ)

ಹಾಸ್ಯದ ಸುನಾಮಿ ಉಕ್ಕಿಸುವ ವೆಂಕಟ ಇನ್ ಸಂಕಟ (ವಿಮರ್ಶೆ)
ವೆಂಕಟ ಇನ್ ಸಂಕಟನಿಗೆ ನೂರಾರು ಸಂಭ್ರಮ
ಚಿತ್ರಮಂದಿರ ತುಂಬಿದೆ; ವೆಂಕಟನ ಸಂಕಟ ಪರಿಹಾರ
ಮಳೆ ನೃತ್ಯದಿಂದ ವೆಂಕಟನ ಗೆದ್ದ ಶರ್ಮಿಳಾ

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X