»   »  ಉಪೇಂದ್ರ ರುಪ್ಪೀಸ್ ರೆಸಾರ್ಟ್ ನಲ್ಲಿ ಅರುಂಧತಿ

ಉಪೇಂದ್ರ ರುಪ್ಪೀಸ್ ರೆಸಾರ್ಟ್ ನಲ್ಲಿ ಅರುಂಧತಿ

Subscribe to Filmibeat Kannada
Duniya Rashmi
ದುನಿಯಾ ರಶ್ಮಿ ಅಭಿನಯಿಸುತ್ತಿರುವ ಅರುಂಧತಿ ಚಿತ್ರದ ಹಾಡೊಂದರ ಚಿತ್ರೀಕರಣ ಬೆಂಗಳೂರಿನ ಹೊರವಲಯದಲ್ಲಿರುವ ಉಪೇಂದ್ರ ಅವರ 'ರುಪ್ಪೀಸ್" ರೆಸಾರ್ಟ್‌ನಲ್ಲಿ ನಡೆಯುತ್ತಿದೆ. ಈ ಚಿತ್ರವನ್ನು ಬಿ.ಆರ್.ಕೇಶವ್ ನಿರ್ದೇಶಿಸುತ್ತಿದ್ದಾರೆ.

ಅರುಂಧತಿ ಚಿತ್ರದ ಈ ಹಾಡಿನ ಚಿತ್ರೀಕರಣದಲ್ಲಿ ನಾಯಕ ಮಹೇಶ್ ಗಾಂಧಿ ಹಾಗೂ ರಶ್ಮಿ ಭಾಗವಹಿಸಿದ್ದರು. ಮಾರ್ಚ್ 27 ರಿಂದ ಪ್ರಾರಂಭವಾಗಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಶೇ.25ರಷ್ಟು ಮುಕ್ತಾಯವಾಗಿದೆ. ಇದೊಂದು ನಾಯಕಿ ಪ್ರಧಾನ ಕಥಾನಕವಾಗಿದ್ದರೂ ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಕ್ರೈಂ ಇಡೀ ಕಥೆಯಲ್ಲಿ ಎದ್ದು ಕಾಣುತ್ತದೆ. ತೆಲುಗಿನಲ್ಲಿ ಬಂದ ಮಾಟ, ಮಂತ್ರ, ತಂತ್ರದ ಅರುಂಧತಿಗೂ ಈ ಚಿತ್ರಕ್ಕೂ ಯಾವುದೇ ಹೋಲಿಕೆಯಿಲ್ಲ. ಅದೇ ಬೇರೆ ಕಥೆ, ಇದೇ ಬೇರೆ ಕಥೆಯಾಗಿದೆ ಎನ್ನುತ್ತಾರೆ ನಿರ್ದೇಶಕ ಬಿ.ಆರ್. ಕೇಶವ್.

ಎಂ.ಎಸ್. ಮಾರುತಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಗೌರಿ ವೆಂಕಟೇಶ್ ಅವರ ಛಾಯಾಗ್ರಹಣ, ಮೋಹನ್ ಜುನೇಜಾರ ಸಂಭಾಷಣೆ, ಪ್ರಸಾದ್‌ರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು, ಬ್ಯಾಂಕ್ ಜನಾರ್ಧನ್, ಸ್ವಸ್ತಿಕ್ ಶಂಕರ್, ಜಯಲಕ್ಷ್ಮಿ, ವಿಕ್ರಮ್ ಉದಯ್‌ಕುಮಾರ್, ಮೋಹನ್ ಜುನೇಜಾ, ಚಂದ್ರಕಲಾ ಮೋಹನ್ ಉಳಿದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅರುಂಧತಿ ಎಂಬ ಹೊಸ ಚಿತ್ರದಲ್ಲಿ ದುನಿಯಾ ರಶ್ಮಿ
ಬೆಂಗಳೂರಿನಲ್ಲಿ ಅರ್ಧ ಶತಕ ಬಾರಿಸಿದ ಅರುಂಧತಿ
ಸೆನ್ಸಾರ್ ಮಂದಾಕಿನಿಗೆ ಬಿಸಿ ಮುಟ್ಟಿಸಿದ್ದು ಯಾಕೆ?
ತೆಲುಗು ಚಿತ್ರಸೀಮೆಗೆ ದುನಿಯಾ ಪಯಣ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada