»   »  ಚಲನಚಿತ್ರನಟ, ತಂತ್ರಜ್ಞರಾಗಲು ಇಲ್ಲಿದೆ ಅವಕಾಶ

ಚಲನಚಿತ್ರನಟ, ತಂತ್ರಜ್ಞರಾಗಲು ಇಲ್ಲಿದೆ ಅವಕಾಶ

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ತಾಂತ್ರಿಕ ತರಬೇತಿ ಕೇಂದ್ರವು 'ಚಲನಚಿತ್ರ ತಾಂತ್ರಿಕ ತರಬೇತಿ' ಯನ್ನು ಆಯೋಜಿಸಿದೆ.ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುವವರಿಗೆ ಉತ್ತಮ ತಾಲೀಮು ಇಲ್ಲಿ ಸಿಗಲಿದೆ.

ಕೇಂದ್ರವು ಸಂಭಾಷಣೆ ರಚನೆ, ವಿಡಿಯೋ ಸಂಕಲನ, ಮೇಕಪ್, ಅಭಿನಯ, ಕಾರ್ಯಕ್ರಮ ನಿರೂಪಣೆ, ಡಿಜಿಟಲ್ ಚಿತ್ರ ನಿರ್ಮಾಣ ವಿಭಾಗಗಳಲ್ಲಿ ಅಲ್ಪಾವಧಿಯ ವಾರಾಂತ್ಯದ ಸಂಜೆ ಹಾಗೂ ದೈನಂದಿನ ಅಲ್ಪಾವಧಿಯ ಪ್ರಾಯೋಗಿಕ ತರಗತಿಗಳನ್ನು ಹಮ್ಮಿಕೊಂಡಿದೆ. ಖ್ಯಾತ ಸಂಭಾಷಣಾಕಾರ, ನಟ ಕುಣಿಗಲ್ ನಾಗಭೂಷಣ್ ಅವರ ನೇತೃತ್ವದಲ್ಲಿ ತರಗತಿಗಳು ನಡೆಯಲಿದೆ. ಜ.15 ರಂದು ತರಗತಿಗಳು ಪ್ರಾರಂಭವಾಗಲಿದೆ.

ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಟೆಕ್ಕಿಗಳು ತಮ್ಮ ಅಭಿನಯ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ವಾರಾಂತ್ಯದ ಜಾಲಿ ಟ್ರಿಪ್ ಗಳ ಬದಲು ನಮ್ಮ ತರಗತಿಗಳಿಗೆ ಬಂದರೆ, ಮುಂದೆ ಸಿನಿಮಾರಂಗವಲ್ಲದಿದ್ದರೂ ಬಿಡುವಿನ ವೇಳೆಯಲ್ಲಿ ನಿರೂಪಕರಾಗಿ ಹೊಸ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬಹುದು. ಸಿನಿಮಾರಂಗ ಪ್ರವೇಶ ಬಯಸಿ ಹಳ್ಳಿಯಿಂದ ಬರುವ ಅನೇಕ ಯುವಕ/ಯುವತಿಯರಿಗೂ ಇದು ಸದಾವಕಾಶ ಎಂದು ತರಬೇತಿ ಕೇಂದ್ರದ ನಿರ್ದೇಶಕರು ಹೇಳುತ್ತಾರೆ.

ಆಸಕ್ತರು ಹೆಚ್ಚಿನಮಾಹಿತಿಗೆ ನಂ. 38/1, 9 ನೇ 'ಬಿ' ಅಡ್ಡರಸ್ತೆ, ಪಾರ್ಕ್ ಏರಿಯಾ, ವಿಲ್ಸನ್ ಗಾರ್ಡನ್, ಬೆಂಗಳೂರು -27 , ದೂರವಾಣಿ ಸಂಖ್ಯೆ : 080-22112276 ಅನ್ನು ಸಂಪರ್ಕಿಸಬಹುದು.

(ದಟ್ಸ್ ಕನ್ನಡ ಸಿನಿ ಮಾಹಿತಿ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada