»   » ಲೋಕಾಯುಕ್ತ ಅಧಿಕಾರಿಯಾಗಿ ಅನಂತನಾಗ್

ಲೋಕಾಯುಕ್ತ ಅಧಿಕಾರಿಯಾಗಿ ಅನಂತನಾಗ್

Posted By:
Subscribe to Filmibeat Kannada

ಹಾಸ್ಯ ಮಿಶ್ರಿತ ಸಾಂಸಾರಿಕ ಚಿತ್ರ '2ನೇ ಮದುವೆ' ಜುಲೈ 9ರಂದು ರಾಜ್ಯದಾದ್ಯಂತ ತೆರೆಕಾಣಲಿದೆ. ಈ ಚಿತ್ರದ ವಿಶೇಷವೆಂದರೆ, ಬಹಳ ದಿನಗಳ ನಂತರ ಅನಂತನಾಗ್-ಸುಹಾಸಿನಿ ಒಟ್ಟಾಗಿ ನಟಿಸಿದ್ದಾರೆ. ಇದೊಂದು ಸಂಪೂರ್ಣ ಹಾಸ್ಯಭರಿತ, ಸಾಂಸಾರಿಕ ಪ್ರೇಮ ಕಥಾಹಂದರವುಳ್ಳ ಚಿತ್ರ.

ಅನಂತನಾಗ್ ಲೋಕಾಯುಕ್ತ ಅಧಿಕಾರಿಯಾಗಿ, ಸುಹಾಸಿನಿ ಬ್ಯಾಂಕೊಂದರ ಮ್ಯಾನೇಜರ್ ಪಾತ್ರದಲ್ಲಿದ್ದು, ಚಿತ್ರದಲ್ಲಿ ಯಾರು ಯಾರಿಗೆ ಎರಡನೇ ಮದುವೆಯಾಗುತ್ತದೆ. ಅದಕ್ಕೆ ಕಾರಣಗಳೇನು? ಎಂಬುದನ್ನು ತಿಳಿಯಲು ಪ್ರೇಕ್ಷಕ ಕುತೂಹಲಕ್ಕೆ ಇದೇ ಶುಕ್ರವಾರ ತೆರೆಬೀಳಲಿದೆ. ಸುರೇಶ್ ಆರ್ಟ್ಸ್ ಮತ್ತು ಒಬೇಷನ್ಸ್ ಲಾಂಛನದಲ್ಲಿ ಕೆ.ಎ. ಸುರೇಶ್ ಮತ್ತು ಕೆ. ರಾಜೀವ್ ನಿರ್ಮಿಸಿರುವ ಚಿತ್ರವಿದು.

ಕಥೆ-ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್‌ಬಾಬು ಅವರೇ ನಿರ್ವಹಿಸಿದ್ದಾರೆ. ಜಯಪಾಲ್ ಅವರ ಸಂಗೀತ ಸಂಯೋಜನೆ, ರಾಜೇಂದ್ರ ಕಾರಂತರ ಸಂಕಲನಇದೆ. ನೆನಪಿರಲಿ ಪ್ರೇಮ್, ಜೆನ್ನಿಫರ್, ಯುವ ಜೋಡಿಯಾಗಿದ್ದು, ಶರಣ್, ತಾರಾ, ರಂಗಾಯಣ ರಘು, ಸಿಂಧೂ, ನವ್ಯ ಉಳಿದ ತಾರಾಗಣದಲ್ಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada