»   »  ಮಿಸ್ಟರ್ ಪೈಂಟರ್ ಚಿತ್ರೀಕರಣ ಮುಕ್ತಾಯ

ಮಿಸ್ಟರ್ ಪೈಂಟರ್ ಚಿತ್ರೀಕರಣ ಮುಕ್ತಾಯ

Posted By:
Subscribe to Filmibeat Kannada
Yogish
ಓಂ ಶ್ರೀ ಚಾಮುಂಡೇಶ್ವರಿ ಫಿಲಂ ಲಾಂಛನದಲ್ಲಿ ಎ ಗಣೇಶ್, ಉಮೇಶ್ ಬಣಕಾರ್ ಕೂಡಿ ನಿರ್ಮಿಸುತ್ತಿರುವ 'ಮಿಸ್ಟರ್ ಪೈಂಟರ್' ಚಿತ್ರದ ಚಿತ್ರೀಕರಣ ನಗರದ ಮೈಸೂರ್ ಲ್ಯಾಂಪ್ಸ್‌ನಲ್ಲಿ ನಿರ್ಮಿಸಿದ ಸೆಟ್‌ನಲ್ಲಿ ಯೋಗೀಶ್-ರಮನಿತೋಚೌದರಿ ಅಭಿನಯದ ಹಾಡಿನೊಂದಿಗೆ ಚಿತ್ರೀಕರಣ ಪೂರ್ಣಗೊಂಡಿತು.

ಚಿತ್ರದ ಕಥೆ, ಸಂಭಾಷಣೆ, ಛಾಯಾಗ್ರಹಣ, ನಿರ್ದೇಶನ ದಿನೇಶ್ ಬಾಬು. ಸಂಗೀತ ಶಂಕರ್ ಜಿ.ಆರ್, ಸಂಕಲನ ನರಹಳ್ಳಿ ಜ್ಞಾನೇಶ್. ಕಲೆ ಬಾಬುಖಾನ್, ನೃತ್ಯ ಮುರಳಿ, ಸಾಹಿತ್ಯ ಕವಿರಾಜ್, ಸಾಹಸ ಅಲ್ಟಿಮೇಟ್ ಶಿವು, ಸಹನಿರ್ದೇಶನ ಜಿ.ಮೋಹನ್ ಸಿಂಗ್, ನಿರ್ವಹಣೆ ಅರಸು.

ತಾರಾಗಣದಲ್ಲಿ ಯೋಗೀಶ್, ರಂಗಾಯಣ ರಘು, ಶರಣ್, ಶಿವಧ್ವಜ್, ರವಿಶಂಕರ್, ಜಯಜಗದೀಶ್, ಶ್ರೀನಿವಾಸಮೂರ್ತಿ, ವೆಂಕಟಾದ್ರಿ, ರಮನೀತೋಚೌದರಿ, ಆಶಾಲತಾ, ವೀಣಾಸುಂದರ್, ರೇಖಾ ಕುಮಾರ್, ಲಕ್ಷ್ಮೀಹೆಗಡೆ, ರೂಪಶ್ರೀ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada