»   » ಕನ್ನಡಕ್ಕೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ

ಕನ್ನಡಕ್ಕೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ

Posted By:
Subscribe to Filmibeat Kannada

ರಾಷ್ಟ್ರಪ್ರಶಸ್ತಿ ಪುರಸ್ಕೃತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕನ್ನಡಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿ ದಾಖಲೆ ನಿರ್ಮಿಸಿದ 'ಜೋಗಿ' ಚಿತ್ರದ ಮುಂದಿನ ಅವತರಣಿಕೆ 'ಜೋಗಯ್ಯ' ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ ಎನ್ನುತ್ತವೆ ಮೂಲಗಳು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೇ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಹೊಸ ಹೊಸ ಸಾಹಸಗಳಿಗೆ ಕೈಹಾಕಿದ್ದಾರೆ. ಈ ಹಿಂದೆ ಮಲ್ಲಿಕಾ ಶೆರಾವತ್ ಹಾಗೂ ಪ್ರಿಯಾಂಕಾ ಕೊಠಾರಿಯನ್ನು ಪ್ರೇಮ್ ಕನ್ನಡಕ್ಕೆ ಕರೆತಂದಿದ್ದರು. ಇದೀಗ ಪ್ರಿಯಾಂಕಾ ಚೋಪ್ರಾ ಮೇಲೆ ಅವರ ಕಣ್ಣು ಬಿದ್ದಿದೆ.

ಪ್ರಿಯಾಂಕಾ ಚೋಪ್ರಾರನ್ನು ಹಾಡೊಂದರಲ್ಲಿ ಬಳಸಿಕೊಳ್ಳಲಿದ್ದು ಇದಕ್ಕಾಗಿ ಅವರ ಕಾರ್ಯದರ್ಶಿಯೊಂದಿಗೆ ಮಾತುಕತೆಯೂ ನಡೆದಿದೆ. ಚಿತ್ರದ ನಾಯಕಿಯಾಗಿ ವಿದ್ಯಾಬಾಲನ್ ರನ್ನು ಕರೆತರಲು ಪ್ರೇಮ್ ಪ್ರಯತ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಸೆಟ್ಟೇರುವುದಕ್ಕೂ ಮುನ್ನವೇ 'ಜೋಗಯ್ಯ'ನ ಅಬ್ಬರ ಜೋರಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada