»   »  ರವಿಚಂದ್ರನ್ ಹೊಸ 'ಹೂ'ಗಳು ನಮಿತಾ, ಮೀರಾ!

ರವಿಚಂದ್ರನ್ ಹೊಸ 'ಹೂ'ಗಳು ನಮಿತಾ, ಮೀರಾ!

Posted By:
Subscribe to Filmibeat Kannada
ಸುದೀಪ್ ನಟಸಿ ನಿರ್ದೇಶಿಸಿದ 'ವೀರ ಮದಕರಿ' ಚಿತ್ರ ಶತಕದತ್ತ ಮುನ್ನುಗ್ಗುತ್ತಿದ್ದು ನಿರ್ಮಾಪಕ ದಿನೇಶ್ ಗಾಂಧಿ ಅವರನ್ನು ಖುಷಿಯಾಗಿಸಿದೆ. ಅವರು ಮತ್ತಷ್ಟು ರಿಮೇಕ್ ಚಿತ್ರಗಳನ್ನು ಕೈಗೆತ್ತಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶಿಸಲಿರುವ ಚಿತ್ರವೂ ಒಂದು.

ದಿನೇಶ್ ಗಾಂಧಿ ನಿರ್ಮಾಣದಲ್ಲಿ ರವಿಚಂದ್ರನ್ ನಟಿಸಿ ನಿರ್ದೇಶಿಸುತ್ತಿರುವ ಚಿತ್ರಕ್ಕೆ 'ಹೂ' ಎಂದು ಹೆಸರಿಡಲಾಗಿದೆ. ಇದು ತೆಲುಗಿನಲ್ಲಿ ವೆಂಕಟೇಶ್ ನಟಿಸಿದ್ದ 'ವಸಂತಂ' ಚಿತ್ರ ರೀಮೇಕ್. ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಮತ್ತು ಸಂಗೀತದ ಜಬಾಬ್ದಾರಿಗಳನ್ನು ರವಿಚಂದ್ರನ್ ಅವರೇ ಹೊತ್ತಿದ್ದಾರೆ ಎಂದು ದಿನೇಶ್ ಗಾಂಧಿ ತಿಳಿಸಿದ್ದಾರೆ.

'ವೀರ ಮದಕರಿ' ಮಾಸ್ ಹಿಟ್ ಚಿತ್ರವಾಗಿತ್ತು. 'ಹೂ' ಪರಿಪೂರ್ಣ ಕುಟುಂಬ ಪ್ರಧಾನ ಚಿತ್ರ ಎನ್ನುತ್ತಾರೆ ದಿನೇಶ್. ಅಂದಹಾಗೆ ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ಕೇರಳ ಮೂಲದ ಮೀರಾ ಜಾಸ್ಮಿನ್ ಮತ್ತೊಬ್ಬರು ತಮಿಳಿನ ನಮಿತಾ.

ಸಾಲು ಸಾಲು ರಿಮೇಕ್ ಚಿತ್ರಗಳನ್ನು ಕೈಗೆತ್ತಿಕೊಳ್ಳುತ್ತಿರುವುದಾಗಿ ದಿನೇಶ್ ತಿಳಿಸಿದ್ದಾರೆ. ಇನ್ನು ಮುಂದೆ ಅವರು ಸ್ವಮೇಕ್ ಚಿತ್ರಗಳನ್ನು ನಿರ್ಮಿಸುವುದಿಲ್ಲವಂತೆ. ಮೊದಲು ಕತೆ ಕೇಳಿದಾಗ ಚೆನ್ನಾಗಿರುತ್ತದೆ. ಆದರೆ ಚಿತ್ರ ಬಿಡುಗಡೆಯಾಗುವ ಹೊತ್ತಿಗೆ ಅದರ ಸ್ವರೂಪವೇ ಬದಲಾಗಿರುತ್ತದೆ. ಹಾಗಾಗಿ ಈ ಸ್ವಮೇಕ್ ಸಹವಾಸ ಸಾಕಪ್ಪಾ ಸಾಕು ಅನ್ನಿಸಿಬಿಟ್ಟಿದೆ ಎನ್ನುತ್ತಾರೆ ದಿನೇಶ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada