twitter
    For Quick Alerts
    ALLOW NOTIFICATIONS  
    For Daily Alerts

    ಭೀಮಾತೀರದಲ್ಲಿ ವಿಮರ್ಶೆ: ಬೆಳಗೆರೆ ಅಳಿಯ ಕಿಟ್ಟಿಯಿಂದ

    By * ವಿನಾಯಕರಾಮ್ ಕಲಗಾರು
    |

    Duniya Vijay & Srinagara Kitty
    ದುನಿಯಾ ವಿಜಯ್ ಮುಖ್ಯ ಭೂಮಿಕೆಯ ಭೀಮಾತೀರದಲ್ಲಿ ಚಿತ್ರವನ್ನು ಪತ್ರಕರ್ತ ರವಿ ಬೆಳಗೆರೆ ಅಳಿಯ ಶ್ರೀನಗರ ಕಿಟ್ಟಿ ಭಾನುವಾರ (ಏ 8) ವೀಕ್ಷಿಸಿದ್ದಾರೆ. ಬಿಡುಗಡೆಯಾದ ದಿನದಿಂದ ದೊಡ್ಡ ಮಟ್ಟದ ವಿವಾದ ಮತ್ತು ಸುದ್ದಿ ಮಾಡಿದ್ದ ಈ ಚಿತ್ರ ವೀಕ್ಷಿಸಲು ಚಿತ್ರದ ನಿರ್ಮಾಪಕ ಅಣಜಿ ನಾಗರಾಜ್ ಕಿಟ್ಟಿಯವರಿಗೆ ಮನವಿ ಮಾಡಿದ್ದರು.

    ಚಿತ್ರ ವೀಕ್ಷಿಸಿ ಹೊರಬಂದ ಶ್ರೀನಗರ ಕಿಟ್ಟಿ ನಮ್ಮ ವರದಿಗಾರರಿಗೆ ನೀಡಿದ ಕ್ವಿಕ್ ಸಂದರ್ಶನ ಇಂತಿದೆ:

    ಪ್ರ: ಕಿಟ್ಟಿಯವರೇ ಒಬ್ಬ ನಟನಾಗಿ, ನಿರ್ಮಾಪಕನಾಗಿ ಭೀಮಾ ತೀರದಲ್ಲಿ ಸಿನಿಮಾ ಏನೆನಿಸಿತು?
    ಕಿಟ್ಟಿ: ಖಂಡಿತ ಒಳ್ಳೆಯ ಪ್ರಯತ್ನ. ಕಮರ್ಷಿಯಲ್ ಆಗಿ ಚಿತ್ರವನ್ನು ಚೆನ್ನಾಗಿ ತೆರೆಗೆ ತಂದಿದ್ದಾರೆ.

    ಪ್ರ: ಭೀಮಾತೀರದ ಹಂತಕರು ಪುಸ್ತಕಕ್ಕೂ ಭೀಮಾತೀರದಲ್ಲಿ ಚಿತ್ರಕೂ ವ್ಯತ್ಯಾಸ ಇದೆಯಾ?
    ಕಿಟ್ಟಿ: ಒಂದು ಸಿನಿಮಾ ಆಗಿ ಭೀಮಾತೀರದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಒಂದು ನೈಜ ಘಟನೆಗೆ ಹೋಲಿಸಿದಂತೆ ಅದೇ ಸಾಮ್ಯತೆವುಳ್ಳ ಪಾತ್ರಗಳನ್ನು ಸೃಷ್ಟಿಸಿದಾಗ ಎಲ್ಲಾ ಕಡೆ ಮಿಸ್ ಹೊಡೆಯುತ್ತದೆ.

    ಪ್ರ: ರವಿ ಬೆಳಗೆರೆಯವರು ಭೀಮಾ ತೀರದಲ್ಲಿ ಚಿತ್ರದ ಬಗ್ಗೆ ಮಾಡಿದ ಕಾಮೆಂಟ್ ಬಗ್ಗೆ ನಿಮ್ಮ ಅಭಿಪ್ರಾಯ?
    ಕಿಟ್ಟಿ: ಒಬ್ಬ ಬರಹಗಾರ, ಸಬ್ಜೆಕ್ಟ್ ಬಗ್ಗೆ ಆಳವಾಗಿ ಅಧ್ಯನ ಮಾಡಿ ವರದಿ ಮಾಡುವ ವಿಚಾರದಲ್ಲಿ ಬೆಳಗೆರೆಯವರ ಅಕ್ಷರದ ಅಭಿಮಾನಿ ನಾನು. ಅವರ ಸಂಬಂಧಿಕನಾಗಿ ಇಲ್ಲಿ ಮಾತನಾಡುತ್ತಿಲ್ಲ. ಆ ಪುಸ್ತಕದಲ್ಲಿ ಬರುವ ರೆಫರೆನ್ಸ್ ತೆಗೆದುಕೊಂಡು ಇನ್ನೂ ಚೆನ್ನಾಗಿ ಸಿನಿಮಾ ಮಾಡಬಹುದಿತ್ತು.

    ಪ್ರ: ಭೀಮಾತೀರದಲ್ಲಿ ಚಿತ್ರ ಗೆಲ್ಲಬಹುದಾ?
    ಕಿಟ್ಟಿ: ಗೆಲ್ಲಬೇಕು. ಉದ್ಯಮದಲ್ಲಿ ವ್ಯಾಪಾರ ವಹಿವಾಟು ಚೆನ್ನಾಗಿ ಆಗಬೇಕು. ಒಂದು ಚಿತ್ರ ಗೆದ್ದರೆ ನೂರಾರು ಮಂದಿಗೆ ಹೆಸರು ಬರುತ್ತದೆ. ಲಕ್ಷಾಂತರ ರೂಪಾಯಿ ವಹಿವಾಟು ಆಗುತ್ತದೆ. ಅದು ಆಗಬೇಕು.

    ಪ್ರ: ಚಿತ್ರದಲ್ಲಿ ನಿಮಗೆ ಇಷ್ಟವಾಗಿದ್ದೇನು? ಇಷ್ಟವಾಗದೆ ಇದ್ದಿದ್ದೇನು?
    ಕಿಟ್ಟಿ: Overall, ಸಿನಿಮಾ ನೋಡಿ ಫುಲ್ ಎಂಜಾಯ್ ಮಾಡಿದೆ. ಆದರೆ ನೈಜ ಘಟನೆ ಮತ್ತು ಪಾತ್ರಗಳು, ಈಗಲೂ ಬದುಕಿರುವ ಪಾತ್ರಗಳನ್ನು ಬಳಸಿಕೊಂಡಾಗ ಇನ್ನಷ್ಟು ಹೋಮ್ ವರ್ಕ್ ಮಾಡಿದರೆ ಚೆನ್ನಾಗಿರುತ್ತಿತ್ತು. ಇಂದು ನನ್ನ ಪರ್ಸನಲ್ ಅಭಿಪ್ರಾಯ. ಇದರಲ್ಲಿ ಖಂಡಿತವಾಗಿಯೂ ಯಾವುದೇ ಪೂರ್ವಾಗ್ರಹವಿಲ್ಲ.

    English summary
    An quick interview with Ravi Belagere Son-in-law actor Sriagaraa Kitty to our correspondent. Kitty was seen this movie on last Sunday.
    Tuesday, April 10, 2012, 11:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X