»   » ಪ್ರಕಾಶ್ ರೈ, ಪೋನಿ ವರ್ಮಾ ರಿಜಿಸ್ಟರ್ಡ್ ಮದುವೆ!

ಪ್ರಕಾಶ್ ರೈ, ಪೋನಿ ವರ್ಮಾ ರಿಜಿಸ್ಟರ್ಡ್ ಮದುವೆ!

Posted By:
Subscribe to Filmibeat Kannada

ನಟ, ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ರೈ ಮತ್ತು ಪೋನಿ ವರ್ಮಾ ತಮ್ಮ ಮದುವೆಯನ್ನು 1955ರ ಹಿಂದು ವಿವಾಹ ಕಾಯಿದೆ ಪ್ರಕಾರ ಹೈದರಾಬಾದಿನಲ್ಲಿ ನೋಂದಾಯಿಸಿಕೊಂಡಿದ್ದಾರೆ. ನೃತ್ಯ ನಿರ್ದೇಶಕಿಯಾಗಿರುವ ಪೋನಿ ವರ್ಮಾರನ್ನು ಆಗಸ್ಟ್ 24, 2010ರಂದು ಪ್ರಕಾಶ್ ರೈ ಮದುವೆಯಾಗಿದ್ದರು.

ಬುಧವಾರ(ಡಿ.8) ಪ್ರಕಾಶ್ ರೈ ದಂಪತಿಗಳು ಮದುವೆ ಪತ್ರಗಳಿಗೆ ಸಹಿ ಹಾಕಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಅರ್ಜಿಯಲ್ಲಿ ಪೋನಿ ವರ್ಮಾ ಅವರ ಹೆಸರು ರೇಷ್ಮಿ ವರ್ಮಾ ಎಂದು ಬರೆಯಲಾಗಿದೆ ಎನ್ನುತ್ತವೆ ಮೂಲಗಳು.

ಪ್ರಕಾಶ್ ರೈ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿರುವುದು ಚಿತ್ರೋದ್ಯಮದ ಬಹಳಷ್ಟು ಮಂದಿಯ ಹುಬ್ಬೇರಿಸಿದೆ. ಪ್ರಕಾಶ್ ರೈ ತಮ್ಮ ಮೊದಲ ಪತ್ನಿ ಲಲಿತಾ ಕುಮಾರಿ ಅವರಿಂದ ವಿವಾಹ ವಿಚ್ಛೇದನ ಪಡೆದಿದ್ದರು. ಸದ್ಯಕ್ಕೆ ಪ್ರಕಾಶ್ ರೈ ಕನ್ನಡದ 'ಪುಟ್ಟಕ್ಕನ ಹೈವೇ' ಚಿತ್ರದಲ್ಲಿ ಬ್ಯ್ಯುಸಿಯಾಗಿದ್ದಾರೆ.

English summary
Versatile actor Prakash Raj and choreographer Pony Verma have finally registered their marriage under the Hindu Marriage Act, 1955, in Hyderabad. They got married according to Hindu rites on August 24 this year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada