For Quick Alerts
  ALLOW NOTIFICATIONS  
  For Daily Alerts

  ಶಂಕರ ನಾಗ್‌ ನೆನಪಿನಲ್ಲಿ ಆಟೋ ರಾಜರು

  By Rajendra
  |

  ಕನ್ನಡ ಚಿತ್ರರಂಗ ಕಂಡ ಅನುಪಮ ತಾರೆ ಶಂಕರ್ ನಾಗ್. ಇಂದು ಅವರು ಜೀವಂತವಾಗಿಲ್ಲದಿದ್ದರೂ ಅವರ ನೆನಪು ಮಾತ್ರ ಇನ್ನೂ ಹಸಿರಾಗಿದೆ. ಇಂದು (ನ.9) ನಾಡಿನೆಲ್ಲೆಡೆ ಅವರ 56ನೇ ಹುಟ್ಟುಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

  ರಾಜ್ಯದ ಹಲವೆಡೆ ಆಟೋ ರಾಜನ ಹುಟ್ಟುಹಬ್ಬವನ್ನು ಅಭಿಮಾನಿ ಬಳಗ ಮತ್ತು ಕಲಾವಿದರ ಸಂಘಗಳು ವಿಶಿಷ್ಟವಾಗಿ ಆಚರಿಸಿದವು. ಹಲವು ಆಟೋ ನಿಲ್ದಾಣಗಳಲ್ಲಿ ಆಟೋ ಚಾಲಕರು ಸಿಹಿ ಹಂಚುವ ಮೂಲಕ ಶಂಕರ್ ನಾಗ್ ಜನುಮ ದಿನವನ್ನು ಆಚರಿಸಿದರು. ಆಟೋ ರಾಜ ಚಿತ್ರದ ಮೂಲಕ ಶಂಕರ್ ನಾಗ್ ಆಟೋ ಚಾಲಕರ ಆರಾಧ್ಯ ದೈವವಾಗಿ ಬದಲಾಗಿದ್ದು ಇತಿಹಾಸ. ಶಂಕರಣ್ಣ ಎಂದರೆ ಕೇವಲ ಅಭಿಮಾನಿಗಳಿಗಷ್ಟೇ ಅಲ್ಲ ಆಟೋ ಚಾಲಕರಿಗೂ ಎಲ್ಲಿಲ್ಲದ ಅಕ್ಕರೆ, ಅಭಿಮಾನ.

  ಖಾಕಿ ತೊಡುವ ಮೂಲಕ ಪೊಲೀಸ್ ಚಿತ್ರಗಳನ್ನು ಹೀಗೂ ತೆಗೆಯಬಹುದು ಎಂದು ತೋರಿಸಿಕೊಟ್ಟಿದ್ದರು. ಅವರ ಪ್ರಯೋಗಗಳು ಒಂದೇ ಎರಡೇ. ನಂದಿಬೆಟ್ಟಕ್ಕೆ ರೋಪ್ ವೇ ಹಾಕುವ ಕನಸು, ಫ್ಲೈ ಓವರ್ ಗಳ ಕಲ್ಪನೆಯೇ ಇಲ್ಲದ ಕಾಲದಲ್ಲಿ ಅವುಗಳ ಬಗ್ಗೆ ಯೋಚನೆ, ಸಾರ್ವಜನಿಕರಿಗೆ ಕಂಟ್ರಿ ಕ್ಲಬ್ಬು ಹೀಗೇ ಅವರ ಕನಸುಗಳು ಬರೀ ಚಿತ್ರರಂಗಕ್ಕಷ್ಟೇ ಸೀಮಿತವಾಗಿರಲಿಲ್ಲ.ಹೇಳುತ್ತಾ ಹೋದರೆ ಅದೊಂದು ಮುಗಿಯದ ಕತೆಯಾಗುತ್ತದೆ.

  ಅನುಪ್ರಭಾಕರ್ ಹುಟ್ಟುಹಬ್ಬ: ವಿಶೇಷ ಅಂದರೆ ಇಂದು ಅನುಪ್ರಭಾಕರ್ ಹುಟ್ಟುಹಬ್ಬವೂ ಹೌದು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೃದಯ ಹೃದಯ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟದ್ದರು. ಶಾಪ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X