»   » ಶಿವಣ್ಣನ 'ಚೆಲುವೆ' ಹೌಸ್ ಫುಲ್ ಪ್ರದರ್ಶನ

ಶಿವಣ್ಣನ 'ಚೆಲುವೆ' ಹೌಸ್ ಫುಲ್ ಪ್ರದರ್ಶನ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಚೆಲುವೆಯೇ ನಿನ್ನೇ ನೋಡಲು' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನರ್ತಕಿ ಚಿತ್ರಮಂದಿರದ ಮುಂದೆ ಶಿವಣ್ಣನ 60 ಅಡಿ ಎತ್ತರದ ಕಟೌಟ್ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

ನರ್ತಕಿ ಚಿತ್ರಮಂದಿರದಲ್ಲಿ 'ಚೆಲುವೆ' ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರ ಬಿಡುಗಡೆಯಾಗಿ ಎರಡು ದಿನ ಕಳೆದಿದ್ದರೂಅಭಿಮಾನಿಗಳು ಇನ್ನೂ ಪಟಾಕಿ ಸಿಡಿಸಿ ಚೆಲುವೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಸದಾ ಸಂಚಾರ ದಟ್ಟಣೆಯಿಂದ ಗಿಜಿಗುಡುವ ಕೆ ಜಿ ರಸ್ತೆಯಲ್ಲಿ ಈಗ 'ಚೆಲುವೆ'ಯ ಆರ್ಭಟ ಜೋರಾಗಿದೆ.

ಬೆಳಗಿನ ಪ್ರದರ್ಶನ ನೋಡಿ ಹೊರಬರುವ ಅಭಿಮಾನಿಗಳು ಶಿವಣ್ಣನ ಅಭಿನಯವನ್ನು ಮೆಚ್ಚಿ ಈಡುಗಾಯಿ ಹೊಡೆಯುವುದು ಅಲ್ಲೀಗ ಸಾಮಾನ್ಯ ದೃಶ್ಯ. ಚಿತ್ರಮಂದಿರಲ್ಲಿ ಅಣ್ಣಾವ್ರ 11 ಗೆಟಪ್ ಶಿವಣ್ಣ ಕಾಣಿಸುತ್ತಿದ್ದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಬಾಕ್ಸಾಫೀಸಲ್ಲಿ ಗಲ್ಲಾಪೆಟ್ಟಿಗೆ ಭರ್ತಿಯಾಗಿದ್ದರೆ ಚಿತ್ರಮಂದಿರದಲ್ಲಿ ಶಿವಣ್ಣನ ಅಭಿನಯವನ್ನು ಮೆಚ್ಚಿ ಅಭಿಮಾನಿಗಳು ಕಾಸಿನ ಸುರಿಮಳೆಗರೆಯುತ್ತಿದ್ದಾರೆ. ಒಟ್ಟಿನಲ್ಲಿ ಬಹಳ ದಿನಗಳ ನಂತರ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ಬಂದಂತಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada