»   »  ಲಂಡನ್ ಗೌಡನಿಗೆ ಜತೆಯಾದ ಉಲ್ಲಾಳದ ಸ್ನೇಹ!

ಲಂಡನ್ ಗೌಡನಿಗೆ ಜತೆಯಾದ ಉಲ್ಲಾಳದ ಸ್ನೇಹ!

Subscribe to Filmibeat Kannada
ಶೀರ್ಷಿಕೆಯಲ್ಲೇ ತೀವ್ರ ಕುತೂಹಲ ಮೂಡಿಸಿರುವ ಚಿತ್ರ 'ಲಂಡನ್ ಗೌಡ'. ಈ ಚಿತ್ರಕ್ಕೆ ನಾಯಕ ನಟ ಉಪೇಂದ್ರ ಎನ್ನುವುದು ಗೊತ್ತಿರುವ ವಿಚಾರ. ಆದರೆ ನಾಯಕಿಗಾಗಿ ತೀವ್ರ ಹುಡುಕಾಟ ನಡೆಸಿದ ಬಳಿಕ ಸ್ನೇಹ ಉಲ್ಲಾಳ್ ಗೌಡತಿಯಾಗಿ ಆಯ್ಕೆಯಾಗಿದ್ದಾರೆ.

ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಹೊರಬಿದ್ದಿಲ್ಲ. ಸ್ನೇಹ ಉಲ್ಲಾಳ್ ಮೂಲತಃ ಕರಾವಳಿಯ ಉಳ್ಳಾಲದವರಾದರೂ ಹುಟ್ಟಿದ್ದು ಮಸ್ಕಟ್ ನಲ್ಲಿ. ಮೊದಲು ಬಣ್ಣ ಹಚ್ಚಿದ್ದು ಹಿಂದಿಯ 'ಲಕ್ಕಿ' ಚಿತ್ರದಲ್ಲಿ. ನಂತರ ಆಕೆಯ ಲಕ್ಕು ಸರಿಯಿಲ್ಲದೆ ಈಗ ದಕ್ಷಿಣದ ಕಡೆ ಮುಖ ಮಾಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ರ ಉಲ್ಲಾಸ ಉತ್ಸಾಹ ಚಿತ್ರಕ್ಕೆ ನಾಯಕಿಯಾಗಿ ಸ್ನೇಹ ಉಲ್ಲಾಳ್ ಪಾದಾರ್ಪಣೆ ಮಾಡಬೇಕಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈಗ ಲಂಡನ್ ಗೌಡನಿಗೆ ಗೌಡತಿಯಾಗಿ ಆಗಮಿಸುತ್ತಿದ್ದಾರೆ. ಕನ್ನಡಿಗ ಯಶೋಸಾಗರ್ ಜತೆ ತೆಲುಗಿನ 'ಉಲ್ಲಸಂಗಾ ಉತ್ಸಾಹಂಗಾ' ಚಿತ್ರದಲ್ಲಿ ಸ್ನೇಹಾ ಉಲ್ಲಾಳ್ ನಟಿಸಿದ್ದರು.

ಉಪೇಂದ್ರ ಅವರೇ ಕತೆ,ಚಿತ್ರಕತೆ, ಸಂಭಾಷಣೆ ಬರೆದಿರುವ ಲಂಡನ್ ಗೌಡ ಚಿತ್ರ ಏಪ್ರಿಲ್ 27ರಂದು ಸೆಟ್ಟೇರಲಿದೆ. ಸಂಗೀತ ವಿ. ಮನೋಹರ್, ನಿರ್ಮಾಪಕ ಎನ್ ಆರ್ ಶೆಟ್ಟಿ. ಉಪೇಂದ್ರ ಅವರ ಸಾಲು ಸಾಲು ಚಿತ್ರಗಳಲ್ಲಿ ಲಂಡನ್ ಗೌಡ ಸಾಕಷ್ಟು ಕುತೂಹಲ, ಚರ್ಚೆಗಳಿಗೆ ಕಾರಣವಾಗಿರುವುದು ವಿಶೇಷ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬಾಲಿವುಡ್ ನಟಿಯರಿಗೆ ಕನ್ನಡ ನಿರ್ಮಾಪಕರಗಾಳ
ಕೋಮಲ್ ಜೊತೆಗಿನ ಸಿನಿಮಾಕ್ಕೆ ರಮ್ಯಾ ನಕಾರ?
ಅನಂತ್ ಮತ್ತು ಸುಹಾಸಿನಿ ಎರಡನೇ ಮದುವೆ!
ಅಂತೂ ಇಂತೂ ಅರ್ಧ ಶತಕ ಪೂರೈಸಿದ ವೆಂಕಟ!
ಯೋಗೀಶ್ ಸಂಭಾವನೆ ದಿನಕ್ಕೆ ಸಾವಿರ ರುಪಾಯಿ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada