Just In
Don't Miss!
- News
ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- Automobiles
ಬಿಡುಗಡೆಗೆ ಸಜ್ಜಾಗುತ್ತಿದೆ 2021ರ ಮಾರುತಿ ಎಕ್ಸ್ಎಲ್5 ಕಾರು
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜನಪ್ರಿಯ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
ಎರಡು ಪ್ರಶಸ್ತಿಯೊಂದಿಗೆ ಆರಂಭವಾದ ಈ ಸಮಾರಂಭ ಈಗ 13ಕ್ಕೇರಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಬಸಂತ್‌ಕುಮಾರ್ ಪಾಟೀಲ್ ಅಂದಿನ ಸಮಾರಂಭವನ್ನು ಉದ್ಘಾಟಿಸುತ್ತಾರೆ. ಹಿರಿಯ ಕಲಾವಿದರು ಹಾಗೂ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕಲಾವಿದರಾದ ಜಯಂತಿ, ಭಾರತಿ ವಿಷ್ಣುವರ್ಧನ ಹಾಗೂ ಡಾ. ಜಯಮಾಲ ಇವರುಗಳು ಅಂದಿನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಶಸ್ತಿ ವಿಜೇತರ ವಿವರಗಳು ಈ ರೀತಿಯಿದೆ.
ಬಿ.ಎಂ.ವೆಂಕಟೇಶ್ ಹಿರಿಯ ಚಲನಚಿತ್ರ ನಿರ್ಮಾಪಕರು
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)
ಗಣೇಶ್ ಕಾಸರಗೋಡು ಮತ್ತು ಬಿ.ಎನ್. ಸುಬ್ರಹ್ಮಣ್ಯ ಹಿರಿಯ ಚಲನಚಿತ್ರ ಪತ್ರಕರ್ತರು
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)
ಡಿ.ಸಿ.ನಾಗೇಶ್ ಪತ್ರಿಕಾ ಛಾಯಾಗ್ರಾಹಕರು
(ಕೆ.ಎಸ್.ಮಲ್ಲಪ್ಪ ಸ್ಮರಣಾರ್ಥ ಪ್ರಶಸ್ತಿ ಛಾಯಾಗ್ರಾಹಕ ಕೆ.ಎಂ.ವೀರೇಶ್ ಅವರಿಂದ)
ಬಿ.ಆರ್.ಛಾಯಾ ಖ್ಯಾತ ಹಿನ್ನಲೆಗಾಯಕರು
('ಡಾ:ರಾಜ್‌ಕುಮಾರ್ ಪ್ರಶಸ್ತಿ ಪಾರ್ವತಮ್ಮ ರಾಜ್‌ಕುಮಾರ್ ಅವರಿಂದ)
ವಿಶಾಖ.ಎನ್ ಯುವ ಪತ್ರಕರ್ತ
('ಶ್ರೀಮತಿ ಸುಮಿತ್ರಮ್ಮ ಮತ್ತು ಶ್ರೀಬಿ.ಸುಬ್ರಮಣ್ಯಂ ಸ್ಮರಣಾರ್ಥ ಪ್ರಶಸ್ತಿ ಪತ್ರಕರ್ತ ಮೈಸೂರುಹರೀಶ್ ಅವರಿಂದ)
ರಾಜೇಂದ್ರಸಿಂಗ್‌ಬಾಬು ನಿರ್ದೇಶಕರು
('ಯಜಮಾನ ಚಿತ್ರದ ಖ್ಯಾತಿ 'ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ ಭಾರತಿ ವಿಷ್ಣುವರ್ಧನ ಅವರಿಂದ)
ಮೈನಾವತಿ ಖ್ಯಾತ ಕಲಾವಿದರು
(ಖ್ಯಾತ ಅಭಿನೇತ್ರಿ ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ)
ಗುರುಕಿರಣ್ ಅತ್ಯತ್ತಮ ಸಂಗೀತ ನಿರ್ದೇಶನ 'ಆಪ್ತರಕ್ಷಕ'ಚಿತ್ರಕ್ಕಾಗಿ
(ಎಂ.ಎಸ್.ರಾಮಯ್ಯ ಚಿತ್ರಾಲಯ ಪ್ರಶಸ್ತಿ)
ರಾಘವದ್ವಾರ್ಕಿ ಅತ್ಯುತ್ತಮ ಕಥಾಲೇಖಕರು 'ಮತ್ತೆ ಮುಂಗಾರು' ಚಿತ್ರ
('ಖ್ಯಾತ ನಿರ್ದೇಶಕ, ನಿರ್ಮಾಪಕ ಕೆ.ವಿ.ಜಯರಾಂ ಪ್ರಶಸ್ತಿ ಮೀನಾಕ್ಷಿ ಜಯರಾಂ ಅವರಿಂದ)
ಎಂ.ಎಲ್.ಪ್ರಸನ್ನ ಅತ್ಯುತ್ತಮ ಸಂಭಾಷಣೆ 'ಕೃಷ್ಣನ್ ಲವ್ ಸ್ಟೋರಿ' ಚಿತ್ರಕ್ಕಾಗಿ
('ಖ್ಯಾತ ಚಿತ್ರ ಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ ಡಾ:ಎಚ್.ಕೆ.ನರಹರಿ ಅವರಿಂದ)
ಅರವಿಂದ್ 'ಜುಗಾರಿ' ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ
(ರಂಗ ತಜ್ಞ, ಹಿರಿತೆರೆ - ಕಿರುತೆರೆ ನಿರ್ದೇಶಕ ಬಿ.ಸುರೇಶ್ ಪ್ರಶಸ್ತಿ)
ಯೋಗರಾಜ್ ಭಟ್ 'ಪಂಚರಂಗಿ' ಚಿತ್ರದ ಗೀತರಚನೆಗಾಗಿ
('ಹಾಸ್ಯ ಸಾಹಿತಿ ಶ್ರೀನಾಡಿಗೇರ್ ಕೃಷ್ಣರಾವ್ ಸ್ಮರಣಾರ್ಥ ಪ್ರಶಸ್ತಿ ಪತ್ರಕರ್ತ ಚೇತನ್ ನಾಡಿಗೇರ್ ಕುಟುಂಬದವರಿಂದ)
ಬೆಂಗಳೂರು ನಾಗೇಶ್ ಹಿರಿಯ ಕಲಾವಿದರು
('ಕಿಚ್ಚ ಕ್ರಿಯೇಷನ್ಸ್ ಪ್ರಶಸ್ತಿ ನಟ ಸುದೀಪ್ ಅವರಿಂದ)