»   »  ಸುದೀಪ್ 'ತೀರ್ಥ' ಇನ್ಮುಂದೆ 'ಮಿಸ್ಟರ್ ತೀರ್ಥ'

ಸುದೀಪ್ 'ತೀರ್ಥ' ಇನ್ಮುಂದೆ 'ಮಿಸ್ಟರ್ ತೀರ್ಥ'

Posted By:
Subscribe to Filmibeat Kannada

ಸುದೀಪ್ ಅಭಿನಯದ 'ತೀರ್ಥ' ಚಿತ್ರ ಏನಾಯ್ತು? ಎಂದು ಕೇಳುತ್ತಿದ್ದವರಿಗೆ 'ಮಿಸ್ಟರ್ ತೀರ್ಥ' ರೂಪದಲ್ಲಿ ಉತ್ತರ ಸಿಕ್ಕಿದೆ! 'ತೀರ್ಥ ಚಿತ್ರದ ಶೀರ್ಷಿಕೆಯನ್ನು 'ಮಿಸ್ಟರ್ ತೀರ್ಥ' ಎಂದು ಬದಲಿಸಿರುವುದಾಗಿ ನಿರ್ಮಾಪಕರಾದ ಶ್ರೀರಾಮ್, ಗೋಪಿ ಹಾಗೂ ಕುಮಾರ್ ತಿಳಿಸಿದ್ದಾರೆ.

ದೂರದ ಬ್ಯಾಂಕಾಕ್‌ನಲ್ಲಿ ಚಿತ್ರದ ಮೂರು ಗೀತೆಗಳ ಚಿತ್ರೀಕರಣ ಸೇರಿದಂತೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಒಟ್ಟು 70ದಿನಗಳ ಚಿತ್ರೀಕರಣ ನಡೆದಿರುವ ಈ ಚಿತ್ರಕ್ಕೆ ಅಶ್ವಿನಿ ರೆಕಾರ್ಡೀಂಗ್ ಸ್ಟೂಡಿಯೋದಲ್ಲಿ ಮಾತಿನ ಜೋಡಣೆ ಹಾಗೂ ಹಿನ್ನಲೆ ಸಂಗೀತ ಕೂಡ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಹೊರಹೊಮ್ಮಲಿದ್ದು, ಮುಂದಿನ ತಿಂಗಳು 'ಮಿಸ್ಟರ್ ತೀರ್ಥ' ಚಿತ್ರಮಂದಿರಕ್ಕೆ ಬರುವ ಸಾಧ್ಯತೆಯಿದೆ.

ಸುದೀಪ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಬೆಡಗಿ ಸಲೋನಿ ನಾಯಕಿಯಾಗಿದ್ದಾಳೆ. ಹಾಸ್ಯನಟ, ಸಂಗೀತ ನಿರ್ದೇಶಕ ಹಾಗೂ ನಿರ್ದೇಶಕ ಸಾಧುಕೋಕಿಲಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿರ್ದೇಶಕರೇ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಚಂದ್ರು ಛಾಯಾಗ್ರಹಣವಿರುವ ಚಿತ್ರದ ತಾರಾಬಳಗದಲ್ಲಿ ಸುದೀಪ್, ಸಲೋನಿ, ಅನಂತನಾಗ್, ಗೀತಾ, ದೊಡ್ಡಣ್ಣ, ಸಾಧುಕೋಕಿಲಾ ಮುಂತಾದವರಿದ್ದಾರೆ. ಪವನ್ ಆರ್ಟ್ಸ್ ಲಾಂಛನದಲ್ಲಿ ತೀರ್ಥ ನಿರ್ಮಾಣವಾಗುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada