»   »  ಕನ್ನಡಕ್ಕೆ ಮತ್ತೊಬ್ಬ ಆಮದು ಬೆಡಗಿ ಮೋನಿಕಾ

ಕನ್ನಡಕ್ಕೆ ಮತ್ತೊಬ್ಬ ಆಮದು ಬೆಡಗಿ ಮೋನಿಕಾ

Posted By:
Subscribe to Filmibeat Kannada

ನಯನತಾರಾ ನಂತರ ಮತ್ತೊಬ್ಬ ಪರಭಾಷಾ ನಟಿ ಮೋನಿಕಾ ಕನ್ನಡಕ್ಕೆ ಆಮದಾಗಿದ್ದಾರೆ.ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಮೋನಿಕಾ ಇದೀಗ ಶಿವರಾಜ್ ಕುಮಾರ್ ಜತೆ ದೇವರು ಕೊಟ್ಟ ತಂಗಿ ಚಿತ್ರದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಶಿವಣ್ಣನ ತಂಗಿಯ ಪಾತ್ರದಲ್ಲಿ ಮೀರಾ ಜಾಸ್ಮಿನ್ ಮಿಂಚಿದರೆ ಪ್ರೇಯಸಿಯ ಪಾತ್ರದಲ್ಲಿ ಮೋನಿಕಾ ಮಿನುಗಲಿದ್ದಾರೆ. ಮೀರಾ ಜಾಸ್ಮಿನ್ ಮತ್ತು ಶಿವರಾಜ್ ಕುಮಾರ್ ಅವರೊಂದಿಗೆ ನಟಿಸಲು ನನಗೆ ಖುಷಿಯಾಗುತ್ತಿದೆ ಎಂದು ಮೋನಿಕಾ ತಿಳಿಸಿದ್ದಾರೆ.

ಇಂದಿರಾ, ಅಳಗಿ,ಭಗವತಿ, ಸಂಡಕೋಳಿ, ಅ ಆ ಇ ಈ ಮುಂತಾದ ತಮಿಳು ಚಿತ್ರಗಳಲ್ಲಿ ಮೋನಿಕಾ ನಟಿಸಿದ್ದಾರೆ. ದೇವರು ಕೊಟ್ಟ ತಂಗಿ ಚಿತ್ರದ ಮೂಲಕ ಇದೀಗ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಪ್ರೇಕ್ಷಕರು ತನ್ನನ್ನು ಹೆಚ್ಚಾಗಿ ಕಾಲೇಜು ಹುಡುಗಿಯ ಪಾತ್ರದಲ್ಲೇ ಇಷ್ಟಪಡುತ್ತಾರೆ ಎನ್ನುತ್ತಾರೆ ಮೋನಿಕಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada