»   »  ವಿರುದ್ಧ ದಿಕ್ಕಿನಲ್ಲಿ ಹೊರಟ ನಟ ಅನಿರುದ್ಧ್!

ವಿರುದ್ಧ ದಿಕ್ಕಿನಲ್ಲಿ ಹೊರಟ ನಟ ಅನಿರುದ್ಧ್!

Subscribe to Filmibeat Kannada
Anirudh
ಹೌದು ನಟ ಅನಿರುದ್ಧ್ ಎಲ್ಲಿ? ಇತ್ತೀಚೆಗೆ ಅವರು ಎಲ್ಲೂ ಕಾಣಿಸುತ್ತಿಲ್ಲವಲ್ಲಾ? ಸದ್ಯಕ್ಕೆ ಅವರು ನಿರ್ದೇಶಕನಾಗುವ ಕನಸನ್ನು ಹೊತ್ತಿದ್ದಾರೆ. ನಿರ್ದೇಶನದ ಕೌಶಲ್ಯಗಳನ್ನು ಕಲಿಯಲು ಪುಣೆಯ ಫಿಲ್ಮ್ ಇನಿಸ್ಟಿಟ್ಯೂಟ್ ನಲ್ಲಿ ತಲ್ಲೀನರಾಗಿದ್ದಾರೆ. ಈ ಬಗ್ಗೆ ಅನಿರುದ್ಧ್ ಪ್ರತಿಯಿಸಿದರು, ಇದೊಂದು ಅತ್ಯುತ್ತಮ ಸಂಸ್ಥೆ. ಖ್ಯಾತ ನಿರ್ದೇಶಕ, ನಟರು ತರಬೇತಿ ಪಡೆದಂತಹ ಸಂಸ್ಥೆ ಎನ್ನುತ್ತ್ತಾರೆ.

ಬೆಳಗ್ಗೆ 9.30ರಿಂದ ಮಧ್ಯರಾತ್ರಿ ತನಕ ಅನಿರುದ್ಧ್ ಫಿಲ್ಮ್ ಇನಿಸ್ಟಿಟ್ಯೂಟ್ ನಲ್ಲಿ ಬಿಜಿ. ಪ್ರಸ್ತುತ ನಾನು ಒಂದು ಚಿತ್ರವನ್ನು ಹೇಗೆ ವೀಕ್ಷಿಸಬೇಕು ಎಂಬುದನ್ನು ಕಲಿಯುತ್ತಿದ್ದೇನೆ. ಸಣ್ಣಪುಟ್ಟ ಸಂಗತಿಗಳನ್ನು ಗಮನವಿಟ್ಟು ಕಲಿಯುತ್ತಿದ್ದೇನೆ. ಕ್ಯಾಮೆರಾದ ಇತಿಹಾಸ, ಕಿರು ಚಿತ್ರಗಳು, ಸಾಕ್ಷ್ಯ ಚಿತ್ರಗಳು ಮುಂತಾದ ವಿಷಯಗಳು ಆಸಕ್ತಿಯನ್ನು ಕೆರಳಿಸುತ್ತಿವೆ ಎನ್ನುತ್ತಾರೆ ಅನಿರುದ್ಧ್.

ನಿರ್ದೇಶಕ, ನಟರಾಗಬೇಕೆಂಬುವರ ಕನಸುಗಳನ್ನು ನನಸು ಮಾಡುವ ಶಕ್ತಿ ಪುಣೆ ಫಿಲ್ಮ್ ಇನಿಸ್ಟಿಟ್ಯೂಟ್ ಗೆ ಇದೆ. ನಿರ್ದೇಶನದತ್ತ ಅನಿರುದ್ಧ್ ಪಯಣ ಮುಂದುವರೆದಿದೆ. ಹಲವಾರು ಕಲೆಗಳ ಸಮ್ಮಿಲನವೇ ಸಿನಿಮಾ. ಇದೊಂದು ಬಹಳ ವಿಸ್ತಾರವಾದ ಮಾಧ್ಯಮ. ಸಿನಿಮಾ ಬಗ್ಗೆ ಕಲಿಯಲು ಮೂರು ವರ್ಷ ಸಾಕಾಗುವುದಿಲ್ಲ ಎನ್ನುತ್ತಾರೆ. ಅನಿರುದ್ಧ್ ನಟನೆಯ 'ಇಜ್ಜೋಡು' ಚಿತ್ರ ಮುಂಗಾರಿನ ನಂತರ ತೆರೆಕಾಣಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada