»   » ಬೆಂಗಳೂರಿನಲ್ಲಿ ಗಿರೀಶ್ ಕಾಸರವಳ್ಳಿ ಚಲನಚಿತ್ರೋತ್ಸವ

ಬೆಂಗಳೂರಿನಲ್ಲಿ ಗಿರೀಶ್ ಕಾಸರವಳ್ಳಿ ಚಲನಚಿತ್ರೋತ್ಸವ

Posted By:
Subscribe to Filmibeat Kannada
Girish Kasaravalli
ಕನ್ನಡದ ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದಗಿರೀಶ್ ಕಾಸರವಳ್ಳಿ ಚಿತ್ರಗಳನ್ನು ನೋಡುವ ಅವಕಾಶ ಎಲ್ಲರಿಗೂ ಸಾಧ್ಯವಾಗಿರಲ್ಲ. ಅವರ ಘಟಶ್ರಾದ್ಧ, ತಬರನ ಕತೆ, ಮನೆ, ಕ್ರೌರ್ಯ, ತಾಯಿಸಾಹೇಬ, ನಾಯಿ ನೆರಳು, ಹಸೀನಾ ಚಿತ್ರಗಳನ್ನು ನೋಡುವ ಸದಾವಕಾಶವನ್ನು ಕೆ ವಿ ಸುಬ್ಬಣ್ಣ ಆಪ್ತ ಸಮೂಹ ಹಾಗೂ ವಾರ್ತಾ ಇಲಾಖೆ ಕಲ್ಪಿಸುತ್ತಿದೆ.

ಈ ಚಲನಚಿತ್ರೋತ್ಸವವು ಶುಕ್ರವಾರ(ಜೂ.10) ರಿಂದ ಗುರುವಾರ (ಜೂ.16)ರವರೆಗೆ ನಡೆಯಲಿದೆ. ಸ್ಥಳ: ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರ, 151, 7ನೇ ಅಡ್ಡ ರಸ್ತೆ, ಟೀಚರ್ಸ್ ಕಾಲೋನಿ, 1ನೇ ಹಂತ, ದಯಾನಂದ ಸಾಗರ್ ಕಾಲೇಜು ಬಳಿ, ವಸುಧಾ ಭವನದ ಎದುರು, ಬೆಂಗಳೂರು-78. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 92425 23523.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಸುಚಿತ್ರಾ ಫಿಲಂ ಸೊಸೈಟಿ ಹಾಗೂ ಕೆ ವಿ ಸುಬ್ಬಣ್ಣ ಆಪ್ತ ಸಮೂಹ ಸಹ ಭಾಗಿತ್ವದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಎರಡು ದಿನಗಳ ಕಾಲ ಡಾ.ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ. ವಿಚಾರ ಸಂಕಿರಣದ ಭಾಗವಾಗಿ ಕಾಸರವಳ್ಳಿ ಚಿತ್ರಗಳ ಪ್ರದರ್ಶನ, ಸಂವಾದ, ವಿಮರ್ಶೆ ಕೂಡ ನಡೆಯಲಿದೆ.

ಸುಚಿತ್ರಾ ಫಿಲಂ ಸೊಸೈಟಿಯಲ್ಲಿ(ಬನಶಂಕರಿ, ಬೆಂಗಳೂರು) ಜೂ.18 ಮತ್ತು 19ರಂದು ವಿಚಾರ ಸಂಕಿರಣ ನಡೆಯಲಿದೆ. ಕಾರ್ಯಕ್ರಮವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಎನ್ ವಿದ್ಯಾಶಂಕರ್ ಅವರಿಂದ "ಕರ್ನಾಟಕ ಸಾಂಸ್ಕೃತಿಕ ರಾಜಕೀಯ : ಕಾಸರವಳ್ಳಿ ಅವರ ಚಿತ್ರಗಳ ತಾತ್ವಿಕ ಅನುಸಂಧಾನ" ವಿಚಾರ ಸಂಕಿರಣದ ಮೊದಲ ಗೋಷ್ಠಿ. ಕಾಸರವಳ್ಳಿ ಅವರ ಚಲನಚಿತ್ರಗಳ ಮಾರ್ಗ ಕುರಿತು ಮಾತನಾಡಲಿದ್ದಾರೆ ಕೆ ವಿ ಅಕ್ಷರಾ. ಕಾಸರವಳ್ಳಿ ನಿರ್ದೇಶನದ ಕೆ ಕೆ ಹೆಬ್ಬಾರ್ ಅವರ ಸಾಕ್ಷ್ಯಚಿತ್ರದ ಬಗ್ಗೆ ಮಾತನಾಡಲಿದ್ದಾರೆ ಅನಿಲ್ ಕುಮಾರ್.

ಗುಲಾಬಿ ಟಾಕೀಸ್ ಪುಸ್ತಕವನ್ನು ಅನಾವರಣಗೊಳಿಸಲಿದ್ದಾರೆ ಡಾ.ಯು.ಆರ್.ಅನಂತಮೂರ್ತಿ. ಕಾರ್ಯಕ್ರಮದಲ್ಲಿ ಪ್ರೊ.ಎಂ ಎಚ್ ಕೃಷ್ಣಯ್ಯ, ಡಾ.ಅನಂತಮೂರ್ತಿ, ಪ್ರೊ ಟಿ ಪಿ ಅಶೋಕ್, ಕೆ ವಿ ಅಕ್ಷರಾ, ಮನು ಚಕ್ರವರ್ತಿಹಾಗೂ ಬಿಎಸ್ ಲಿಂಗದೇವರು ಭಾಗವಹಿಸಲಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
The Karnataka Chalanachitra Academy in association with Karnataka Sahitya Academy, Suchitra Film Society, KV Subbanna Aptha Samooha is organizing two days Dr Girish Kasaravalli film seminar, analysis and screening in Bengaluru. The two days event will be held at Suchitra Film Society on 18th and 19th of June.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada