»   » ನಿಜ ಜೀವನದಲ್ಲೂ ಹೀರೋ ಆದ ಜಗ್ಗೇಶ್

ನಿಜ ಜೀವನದಲ್ಲೂ ಹೀರೋ ಆದ ಜಗ್ಗೇಶ್

Posted By:
Subscribe to Filmibeat Kannada

ರೈಲಿನ ಚಕ್ರದಡಿ ಸಿಲುಕಿ ಸಾವು - ಬದುಕಿನ ನಡುವೆ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ ಚಿತ್ರನಟ ಮತ್ತು ವಿಧಾನ ಪರಿಷತ್ ಸದಸ್ಯ ಜಗ್ಗೇಶ್. ನವರಸನಾಯಕ ನಿಜ ಜೀವನದಲ್ಲೂ ಹೀರೋ ಎನಿಸಿಕೊಂಡಿದ್ದಾರೆ. ಮಂಗಳವಾರ (ಫೆ. 9) ರಾತ್ರಿ ನಗರದ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಶ್ರೀರಾಮಪುರದ ವಿಜಯ್ ಕುಮಾರ್ ಅನ್ನುವವರು ಈ ಅದೃಷ್ಟಶಾಲಿ.

ತನ್ನ ರಾಜಕೀಯ ಜೀವನದ ಗಾಡ್ ಫಾದರ್ ಎಂದೇ ಹೇಳುವ ಸಾರಿಗೆ ಸಚಿವ ಆರ್ ಅಶೋಕ್ ಅವರು ಬಳ್ಳಾರಿಗೆ ಪ್ರಯಾಣಿಸುತ್ತಿದ್ದರು. ಅವರನ್ನು ಬೀಳ್ಕೊಡಲು ಜಗ್ಗೇಶ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಸಚಿವರು ರೈಲಿನಲ್ಲಿ ಕೂರುತ್ತಿದ್ದಂತೆ ಜಗ್ಗೇಶ್ ಅವರಿಗೆ ಯಾರೋ ನೋವಿನಿಂದ ನರಳಾದುತ್ತಿರುವುದು ಕೇಳಿಸಿತು. ಕೂಡಲೇ ಟಾರ್ಚ್ ಹಿಡಿದು ಅಲ್ಲಿಗೆ ಧಾವಿಸಿದಾಗ ವ್ಯಕ್ತಿಯೊಬ್ಬ ನೋವಿನಿಂದ ನರಳಾದುತ್ತಿರುವುದು ಕೇಳಿಸಿತು. ತಕ್ಷಣ ತನ್ನ ಅಂಗರಕ್ಷಕರ ರಾಘವೇಂದ್ರ ಅವರನ್ನು ಇಳಿಸಿಚಕ್ರದಡಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಮೇಲಕ್ಕೆ ಎತ್ತಿದರು. ಆ ವೇಳೆಗೆ ವ್ಯಕ್ತಿಯ ಕಾಲುಗಳು ರೈಲು ಚಕ್ರಕ್ಕೆ ಸಿಲುಕಿ ತುಂಡಾಗಿತ್ತು.

ಜಸ್ಟ್ ಮಾತ್ ಮಾತಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಇಲ್ಲಿ

ಕೂಡಲೇ ಗಾಯಾಳುವನ್ನು ವಿಕ್ಟೋರಿಯ ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆಯ ಅಧೀಕ್ಷ ತಿಲಕ್ ರನ್ನು ಜಗ್ಗೇಶ್ ಸಂಪರ್ಕಿಸಿ ಚಿಕಿತ್ಸೆಗೆ ಏರ್ಪಾಟು ಮಾಡಿದರು. ಬಳಿಕೆ ಪೊಲೀಸರು ವಿಚಾರಣೆ ನಡೆಸಿದಾಗ ವ್ಯಕ್ತಿ ಶ್ರೀರಾಮಪುರದ ನಿವಾಸಿ ಜಯಕುಮಾರ್ ಕೆಜಿಎಫ್ ಕಡೆ ಹೊರಟಿದ್ದ ಎಂಬ ವಿಚಾರ ತಿಳಿಯಿತು. ರೈಲು ಹತ್ತುವಾಗ ತಳ್ಳಾಟ ಉಂಟಾಗಿ ಕೆಳಗೆ ಬಿದ್ದಿದರು. ಆತನ ಚಿಕಿತ್ಸೆಗೆ ಸಚಿವ ಅಶೋಕ್ ಮತ್ತು ಜಗ್ಗೇಶ್ ಸ್ಥಳದಲ್ಲೇ ತಲಾ ಹತ್ತುಸಾವಿರ ನೀಡಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada