»   » ನಿರ್ದೇಶಕ ಪ್ರೇಮ್ 'ಡವ್' ಮಾಡ್ತಾರಂತೆ

ನಿರ್ದೇಶಕ ಪ್ರೇಮ್ 'ಡವ್' ಮಾಡ್ತಾರಂತೆ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ 'ಜೋಗಯ್ಯ' ಚಿತ್ರ ಮಾಡುವುದಕ್ಕೂ ಮುನ್ನ ನಿರ್ದೇಶಕ ಪ್ರೇಮ್ 'ಡವ್' ಮಾಡುತ್ತಿದ್ದಾರೆ. ಇದೇನಿದು ಯಾವುದೋ ಭಾಷೆ ಬಳಕೆ ಮಾಡುತ್ತಿದ್ದೀರಲ್ಲಾ ಎಂದು ಕೇಳಬೇಡಿ. ಪ್ರೇಮ್ ಮುಂದಿನ ಚಿತ್ರದ ಹೆಸರೆ ಹಾಗಿದೆ 'ಡವ್'. ಈ ಚಿತ್ರ ಏಪ್ರಿಲ್ 24ರಂದು ಸೆಟ್ಟೇರಲಿದೆ.

'ಪ್ರೀತಿ ಏಕೆ ಭೂಮಿ ಮೇಲಿದೆ?' ಚಿತ್ರದ ಮೂಲಕ ಪ್ರೇಮ್ ನಟನೆಗೆ ಅಡಿಯಿಟ್ಟಿದ್ದರು. ಆದರೆ ಆ ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಹೀನಾಯವಾಗಿ ಸೋತಿತ್ತು. ಈ ಸೋಲಿನಿಂದ ಕಂಗೆಡದ ಪ್ರೇಮ್ ಇದೀಗ ಡವ್ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದಾರೆ. ಡವ್ ನಲ್ಲಿ ನಟನೆಯ ಜೊತೆಗೆ ನಿರ್ದೇಶವನ್ನು ಪ್ರೇಮ್ ಮಾಡುತ್ತಿದ್ದಾರೆ.

ಚಿತ್ರದ ನಾಯಕಿಗಾಗಿ ಹುಡುಕಾಟ ನಡೆದಿದೆ. ನಟಿಮಣಿಯರ ಸಂಭಾವನೆ ಸಿಕ್ಕಾಪಟ್ಟೇ ತುಟ್ಟಿಯಾಗಿರುವ ಕಾರಣ ಪ್ರೇಮ್ ಈ ಬಾರಿ ಹೊಸಬರಿಗೆ ಮಣೆ ಹಾಕುತ್ತಿದ್ದಾರೆ. 'ಡವ್' ನಲ್ಲಿ ಕನ್ನಡ ಹುಡುಗಿಗೆ ಅವಕಾಶ ಕೊಡಲಿರುವುದಾಗಿ ಪ್ರೇಮ್ ತಿಳಿಸಿದ್ದಾರೆ. ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ದಶಾವತಾರ ಚಂದ್ರು. ಸಂಗೀತ ವಿ ಹರಿಕೃಷ್ಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada