»   » ರಾಜ್ ಯಶಸ್ಸಿನ ಹಿಂದೆ ತ್ಯಾಗವಿತ್ತು: ಬರಗೂರು

ರಾಜ್ ಯಶಸ್ಸಿನ ಹಿಂದೆ ತ್ಯಾಗವಿತ್ತು: ಬರಗೂರು

Posted By: Staff
Subscribe to Filmibeat Kannada

ವರನಟ ಡಾ.ರಾಜ್ ಕುಮಾರ್ ಅವರ ಖ್ಯಾತಿ ಹಾಗೂ ಯಶಸ್ಸಿನ ಹಿಂದೆ ತ್ಯಾಗ ಹಾಗೂ ಅವಮಾನದ ಕತೆಯಿದೆ ಎಂದು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ. "ಡಾ ರಾಜ್ ಕುಮಾರ್ ಚಿತ್ರಕಥನ" ವಿಚಾರಸಂಕಿರಣವನ್ನು ಧಾರವಾಡದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿಚಾರಸಂಕಿರಣವನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಡಾ.ರಾಜ್ ಕುಮಾರ್ ಅಧ್ಯಯನ ಪೀಠ, ಜಿಲ್ಲಾ ಸಾಹಿತ್ಯ ಪರಿಷತ್ ಧಾರವಾಡ ಘಟಕ ಹಾಗೂ ಅಣ್ಣಾಜಿರಾವ್ ಸಿರೂರು ರಂಗಮಂದಿರ ಪ್ರತಿಷ್ಠಾನ ಭಾನುವಾರಜಂಟಿಯಾಗಿ ಆಯೋಜಿಸಿದ್ದವು. "ರಾಷ್ಟ್ರಕವಿ ಕುವೆಂಪು ಹಾಗೂ ರಾಜ್ ಕುಮಾರ್ ಅವರ ನಡುವೆ ಸಾಮ್ಯತೆ ಇತ್ತು. ಇವರಿಬ್ಬರೂ ಸಾಂಸ್ಕೃತಿಕ ಸಂಕೇತವಿದ್ದಂತೆ" ಎಂದು ಬರಗೂರು ಅಭಿಪ್ರಾಯಪಟ್ಟರು.

10 sacrifice behind rajkumar success baragura

ಡಾ.ರಾಜ್ ಕುಮಾರ್ ಚಿತ್ರಗಳ ಬಗ್ಗೆ ಕೆ ಆರ್ ದುರ್ಗಾದಾಸ್ ಮಾತನಾಡಿದರು. ಕನ್ನಡ ಭಾಷೆ, ಕನ್ನಡ ಸಮುದಾಯ ಮತ್ತು ಸಿನಿಮಾಗಳಲ್ಲಿ ಕನ್ನಡ ಸಾಹಿತ್ಯ ಕುರಿತು ಎಚ್ ಎಂ ಮಹೇಶ್ವರಯ್ಯ, ಸುರೇಶ್ ಕುಲಕರ್ಣಿ ಮತ್ತು ಜಗದೀಶ್ ಕೊಪ್ಪ ಮಾತನಾಡಿದರು. ಕವಿ ಚನ್ನವೀರ ಕಣವಿ, ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಎ ಮುರಿಗೆಪ್ಪ ಉಪಸ್ಥಿತರಿದ್ದರು.

English summary
10 sacrifice behind rajkumar success baragura
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada