»   » ಪ್ರೇಕ್ಷಕರ ಬದ್ಧತೆಗೆ ಶೇಷಾದ್ರಿ ಉಪಾಯ

ಪ್ರೇಕ್ಷಕರ ಬದ್ಧತೆಗೆ ಶೇಷಾದ್ರಿ ಉಪಾಯ

By: *ಮಂಡಕ್ಕಿ ರಾಜ
Subscribe to Filmibeat Kannada

ಪಿ. ಶೇಷಾದ್ರಿ ಅವರ ವಿಮುಕ್ತಿ ಚಿತ್ರ ಫೆ.12ರಂದು ತೆರೆಕಾಣಲಿದೆ, ಕೈಲಾಶ್ ಹಾಗೂ ಪಿವಿಆರ್‌ಗಳಲ್ಲಿ. ಮಹಾ ಶಿವರಾತ್ರಿಯಂದು ಚಿತ್ರ ತೆರೆ ಕಾಣುತ್ತಿರುವುದಕ್ಕೂ 'ವಿಮುಕ್ತಿ' ಎನ್ನುವ ಹೆಸರಿಗೂ ಕಾಕತಾಳೀಯ ನಂಟು ಮಾತ್ರ!

ಅಂದಹಾಗೆ, ತಾರೆಗಳ ಸಿನಿಮಾಗಳೇ ಮುಗ್ಗರಿಸುತ್ತಿರುವಾಗ 'ವಿಮುಕ್ತಿ' ನೋಡಲು ಜನ ಬರುತ್ತಾರಾ? ಈ ಅನುಮಾನ ಶೇಷಾದ್ರಿ ಅವರಿಗೂ ಇದೆ. ಎದುರಿಗೆ ಸಿಕ್ಕವರೆಲ್ಲ ಸಿನಿಮಾ ಬಗ್ಗೆ ಒಳ್ಳೆಯ ಮಾತನಾಡುತ್ತಾರೆ. ಸಿನಿಮಾ ನೋಡುವ ಆಸೆಯನ್ನೂ ವ್ಯಕ್ತಪಡಿಸುತ್ತಾರೆ. ಆದರೆ, ಚಿತ್ರಮಂದಿರಕ್ಕೆ ಮಾತ್ರ ಬರುವುದಿಲ್ಲ ಎನ್ನುವ ಅನುಭವ ಶೇಷಾದ್ರಿ ಅವರದ್ದು. ಈ ಸಲ ಹಾಗಾಗದಿರಲು ಅವರೊಂದು ಉಪಾಯ ಹುಡುಕಿದ್ದಾರೆ.

ಒಂದಷ್ಟು ಪಾಸ್‌ಗಳನ್ನು ಮುದ್ರಿಸಿ, ಅವುಗಳನ್ನು ಥಿಯೇಟರ್‌ನ ಟಿಕೇಟ್ ಬೆಲೆಗೆ ಆಸಕ್ತರಿಗೆ-ಗೆಳೆಯರಿಗೆ ಮಾರುವುದು ಶೇಷಾದ್ರಿ ಉಪಾಯ. ಟಿಕೇಟ್‌ಗೆ ಬದಲು ಈ ಪಾಸ್‌ಗಳನ್ನು ತೋರಿಸಿ ಥಿಯೇಟರ್‌ಗೆ ಹೋಗಬಹುದು. ಒಂದುವೇಳೆ ಪಾಸ್ ಕೊಂಡವರು ಥಿಯೇಟರ್‌ಗೆ ಹೋಗಲು ಸಾಧ್ಯವಾಗದಿದ್ದರೆ ಹಣ ಕಳೆದುಕೊಳ್ಳುತ್ತಾರೆ. ಪ್ರೇಕ್ಷಕರಲ್ಲಿ ಸಿನಿಮಾದ ಬಗ್ಗೆ ಒಂದು ಬದ್ಧತೆ ಮೂಡಿಸುವುದು ಈ ಪಾಸ್ ಮಾರಾಟದ ಉದ್ದೇಶ. ಸಿನಿಮಾ ಬಗೆಗಿನ ಕಮಿಟ್‌ಮೆಂಟ್ ಕೇವಲ ಮಾತಿಗೆ ಸೀಮಿತವಾಗಬಾರದು ಎನ್ನುವುದು ಶೇಷಾದ್ರಿ ಅನಿಸಿಕೆ.

ಉಳಿದಂತೆ, ವಿಮುಕ್ತಿ ಚಿತ್ರವನ್ನು ಜನರ ಬಳಿಗೆ ಕೊಂಡೊಯ್ಯುವ ಎಂದಿನ ಪ್ರಯತ್ನವನ್ನು ಶೇಷಾದ್ರಿ ಮುಂದುವರಿಸಲಿದ್ದಾರೆ. ನೂರು ಪ್ರೇಕ್ಷಕರಿದ್ದರೆ ಸಾಕು, ಅಲ್ಲಿಗೆ ತಮ್ಮ ಚಿತ್ರವನ್ನು ಕೊಂಡೊಯ್ಯಲು ಶೇಷಾದ್ರಿ ಸಿದ್ಧ. ಸಹೃದಯರೊಂದಿಗೆ ಸಂವಾದಕ್ಕೆ ಸದಾ ಸನ್ನದ್ಧ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada