»   » ಶಂಕರನಾಗ್ ಮಿಂಚಿನ ಓಟ ಚಿತ್ರ ನೋಡೋಣ ಬನ್ನಿ

ಶಂಕರನಾಗ್ ಮಿಂಚಿನ ಓಟ ಚಿತ್ರ ನೋಡೋಣ ಬನ್ನಿ

Posted By:
Subscribe to Filmibeat Kannada
Actor Shankar Nag
ಶಂಕರನಾಗ್ ನಿರ್ದೇಶಿಸಿ ನಟಿಸಿರುವ ಮಿಂಚಿನ ಓಟ ಚಿತ್ರವನ್ನು ನೀವು ನೋಡಿಲ್ಲವೆ? ಅನಂತನಾಗ್ ಹಾಗೂ ಶಂಕರನಾಗ್ ಜೊತೆಯಾಗಿ ಅಭಿನಯಿಸಿದ ಈ ಚಿತ್ರ 1980ರಲ್ಲಿ ತೆರೆಕಂಡಿತ್ತು. ಕ್ರಿಮಿನಲ್ ಒಬ್ಬನ ಜೀವನಕತೆಯಾಧಾರಿತ ಚಿತ್ರವಿದು.

ಶಂಕರನಾಗ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಮಿಂಚಿನ ಓಟವೂ ಒಂದು. ರಮೇಶ್ ಭಟ್ ಈ ಚಿತ್ರದ ಮೂಲಕವೇ ಬೆಳ್ಳಿತೆರೆಗೆ ಪರಿಚಯವಾಗಿದ್ದು. ಕಟ್ಟೆ (ಶಂಕರನಾಗ್), ತಾತಾ (ಲೋಕನಾಥ್) ಹಾಗೂ ಟೋನಿ (ಅನಂತನಾಗ್) ಪಾತ್ರಗಳು ಅದ್ಭುತವಾಗಿ ಮೂಡಿಬಂದಿವೆ.

ಈ ಚಿತ್ರವನ್ನು ಮತ್ತೊಮ್ಮೆ ನೋಡುವ ಅವಕಾಶವನ್ನು ಕಲ್ಪಿಸುತ್ತಿದೆ ಕೆ ವಿ ಸುಬ್ಬಣ್ಣ ಆಪ್ತರಂಗಮಂದಿರ ಹಾಗೂ ವಾರ್ತಾ ಇಲಾಖೆ. ಶಂಕರನಾಗ್ ಅವರ ನೆನೆಪಿಗಾಗಿ ಈ ಚಿತ್ರ ಪ್ರದರ್ಶನವನ್ನು ಭಾನುವಾರ ಮಾಧ್ಯಹ್ನ 3.30ಕ್ಕೆ ಆಯೋಜಿಸಲಾಗಿದೆ.

ಚಿತ್ರದ ಪಾತ್ರವರ್ಗದಲ್ಲಿ ಅರುಂಧತಿ ನಾಗ್, ರಮೇಸ್ ಭಟ್ ಪ್ರಿಯಾ ತೆಂಡೂಲ್ಕರ್ ಮುಂತದವರಿದ್ದಾರೆ. ಸ್ಥಳ: ಕೆವಿ ಸುಬ್ಬಣ್ಣ ಆಪ್ತ ರಂಗಮಂದಿರ, ನಂ.151, 7ನೇ ಕ್ರಾಸ್, ವಸುಧಾ ಭವನದ ಎದುರು, ದಯಾನಂದ ಸಾಗರ್ ಕಾಲೇಜು ಹತ್ತಿರ. ಕುಮಾರಸ್ವಾಮಿ ಲೇಔಟ್, ಬೆಂಗಳೂರು. (ಒನ್‌ಇಂಡಿಯಾ ಕನ್ನಡ)

English summary
Kannada film Minchina ota directed by actor,director Shankar Nag starring his brother Anant Nag and himself will be screening at K. V. Subbanna Aptha Rangamandira Theater on 13th Nov 3.30 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada