»   »  ಸುರೇಶ್ ಅರಸ್ ನಿರ್ಮಾಣದಲ್ಲಿ 'ಪೆರೋಲ್'

ಸುರೇಶ್ ಅರಸ್ ನಿರ್ಮಾಣದಲ್ಲಿ 'ಪೆರೋಲ್'

Posted By:
Subscribe to Filmibeat Kannada

ಕಳೆದ ವಾರ ಬೆಂಗಳೂರಿನ ಪ್ರಸಾದ್ ರಿರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಪೆರೋಲ್ ಚಿತ್ರದ ಒಟ್ಟು ನಾಲ್ಕು ಹಾಡುಗಳಿಗೆ ಧ್ವನಿಮುದ್ರಣ ಕಾರ್ಯ ನಡೆಯಿತು. ಬಹಳ ದಿನಗಳ ಹಿಂದೆ "ಅಮೃತವಾಣಿ" ಎಂಬ ಚಿತ್ರ ನಿರ್ದೇಶನ ಮಾಡಿದ್ದ ಶೇಖರ್ ಅವರು ಕಥೆ , ಚಿತ್ರಕಥೆ ಬರೆದು ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಒಟ್ಟು ಆರು ಭಾಷೆಗಳ ಚಿತ್ರಗಳಿಗೆ ಸುಮಾರು ನಾಲ್ಕು ನೂರು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿದ್ದು ರಾಜ್ಯಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿಗಳಿಸಿದ ಸುರೇಶ್ ಅರಸ್ ಅವರು ಪ್ರಥಮ ಬಾರಿಗೆ ಕನ್ನಡ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಈ ಚಿತ್ರಕ್ಕೆ ಬಾಲಾಜಿ.ಕೆ. ಮಿತ್ರನ್ ಸಂಗೀತ. ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ಬಿ.ಎ. ಮಧು ಸಂಭಾಷಣೆ, ಎಸ್.ಎಲ್. ಬಾಲಾಜಿ ನೃತ್ಯ ನಿರ್ದೇಶನ, ಜಯಕುಮಾರ್, ಚಂದ್ರಶೇಖರ್ ನಿರ್ಮಾಣ ನಿರ್ವಹಣೆ ಎಸ್.ಬಾಹುಬಲಿ, ಸುಧಾಕರ್ ಸಹ ನಿರ್ದೇಶನವಿರುವ ಈ ಚಿತ್ರದ ತಾರಾ ಬಳಗದಲ್ಲಿ ಜಾಲಿಡೇಸ್ ಚಿತ್ರದಲ್ಲಿ ನಟಿಸಿದ್ದ ಪ್ರದೀಪ್, ವಿಶ್ವಾಸ್ ಹಾಗೂ ಬಾಜಿ ಚಿತ್ರದ ನಾಯಕಿ ರಾಣಿ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು, ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada