For Quick Alerts
  ALLOW NOTIFICATIONS  
  For Daily Alerts

  ಚೆಲುವನಾರಾಯಣನ ದಿವ್ಯ ಸನ್ನಿಧಿಯಲ್ಲಿ ವೀರಬಾಹು

  By Rajendra
  |

  ಚೆಲುವನಾರಾಯಣನ ದಿವ್ಯಸನ್ನಿಧಿಯ ಮೇಲುಕೋಟೆಯಲ್ಲಿ ಸಂದೇಶ್‌ನಾಗರಾಜ್ ನಿರ್ಮಿಸುತ್ತಿರುವ 'ವೀರಬಾಹು' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ನಿಸರ್ಗ ದೇವತೆ ನೆಲೆಯೂರಿ ನಿಂತಿರುವ ಈ ಊರು ಚಿತ್ರದಲ್ಲಿ ನಾಯಕಿಯ ತವರುಮನೆ.

  ನಾಯಕಿಯ ಕುಟುಂಬದವರ ಪರಿಚಯ ಹಾಗೂ ನಾಯಕಿಯ ಮದುವೆಯ ಸಂದರ್ಭದ ಚಿತ್ರೀಕರಣವನ್ನು ಮೇಲುಕೋಟೆಯಲ್ಲೆ ನಡೆಸಿರುವುದಾಗಿ ನಿರ್ದೇಶಕ ಎಸ್.ಮಹೇಂದರ್ ತಿಳಿಸಿದ್ದಾರೆ. ವಿಜಯ್, ನಿಧಿಸುಬ್ಬಯ್ಯ, ಎ.ಟಿ.ರಘು, ರಂಗಾಯಣರಘು, ಅವಿನಾಶ್, ಧರ್ಮ, ವಿನಯಾಪ್ರಸಾದ್, ಕಿಶೋರಿಬಲ್ಲಾಳ್, ಅಚ್ಯುತ್‌ಕುಮಾರ್, ರೇಖಾಕುಮಾರಿ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

  ಆಗಸ್ಟ್ 15ರ ನಂತರ ಮುತ್ತತ್ತಿ ಹಾಗೂ ಮೇಕೆದಾಟಿನಲ್ಲಿ 'ವೀರಬಾಹು' ಚಿತ್ರದ ಚಿತ್ರೀಕರಣ ನಡೆಯಲಿದೆ. ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಅನಂತ್ ಅರಸ್ ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ, ಪ್ರಸಾದ್ ಸಹ ನಿರ್ದೇಶನ, ಎಂ.ಎಸ್.ರಮೇಶ್ ಸಂಭಾಷಣೆ ಹಾಗೂ ವಿಜಯಕುಮಾರ್ ನಿರ್ಮಾಣ ನಿರ್ವಹಣೆಯಿದೆ.

  ವಿಜಯ್, ನಿಧಿಸುಬ್ಬಯ್ಯ, ರಂಗಾಯಣರಘು, ರಾಜುತಾಳಿಕೋಟೆ, ಅವಿನಾಶ್, ಎಂ.ಎನ್.ಲಕ್ಷ್ಮೀದೇವಿ, ಎ.ಟಿ.ರಘು, ಅಚ್ಯುತ್‌ಕುಮಾರ್, ರೇಖಾಕುಮಾರ್, ಧರ್ಮ, ಕಿಶೋರಿಬಲ್ಲಾಳ್, ವಿನಯಪ್ರಸಾದ್ ತಾರಾಬಳಗವಿದೆ. ಸಂದೇಶ್ ಕಂಬೈನ್ಸ್ ನಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X