»   » ಜಾಕಿ ಶ್ರಾಫ್ 'ಆ ಮರ್ಮ' ಡಬ್ಬಿಂಗ್ ಚಿತ್ರವೇ?

ಜಾಕಿ ಶ್ರಾಫ್ 'ಆ ಮರ್ಮ' ಡಬ್ಬಿಂಗ್ ಚಿತ್ರವೇ?

Subscribe to Filmibeat Kannada

'ಆ ಮರ್ಮ' ಕನ್ನಡಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಜಾಕ್ರಿ ಶ್ರಾಫ್ ಕನ್ನಡದಲ್ಲಿ ಮತ್ತೊಮ್ಮೆ ಕಾಣಿಸುತ್ತಿರುವುದು. ಹಾಗಿದ್ದರೆ ಈ ಚಿತ್ರ ಡಬ್ಬಿಂಗ್ ಚಿತ್ರವೇ?

ಈ ಪ್ರಶ್ನೆಯನ್ನು ಚಿತ್ರದ ನಿರ್ದೇಶಕ ಮಧುಸೂಧನ್ ಅವರನ್ನು ಕೇಳಿದರೆ, ಬೆಂಗಳೂರಿನಲ್ಲಿ 11 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಉಳಿದ ಭಾಗವನ್ನು ಮುಂಬೈ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಿಸಿದ್ದೇವೆ. ಇದೊಂದು ಸಂಪೂರ್ಣ ಮನರಂಜನಾತ್ಮಕ ಚಿತ್ರ ಅಷ್ಟೆ. ಜಾಕಿ ಶ್ರಾಫ್ ಅವರು ಮಾಂತ್ರಿಕನ ಪಾತ್ರದಲ್ಲಿ ಕಾಣಿಸಲಿದ್ದಾರೆ. ಇದು ಡಬ್ಬಿಂಗ್ ಚಿತ್ರ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

'ಆ ಮರ್ಮ' ಚಿತ್ರವನ್ನು ತೆಲುಗು ಮತ್ತು ತಮಿಳಿಗೆ ಡಬ್ ಮಾಡುತ್ತಿದ್ದೇವೆ ಎನ್ನುವ ಮಧುಸೂಧನ್ ಈ ಚಿತ್ರದ ನಿರ್ಮಾಪಕರು ಹೌದು. ಜೊತೆಗೆ ಕತೆ, ಚಿತ್ರಕತೆ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಚಿತ್ರದಲ್ಲಿ ಸಾಯಿ ಕುಮಾರ್, ಥ್ರಿಲ್ಲರ್ ಮಂಜು, ಅರ್ಚನಾ ಮುಖ್ಯ ಪಾತ್ರಧಾರಿಗಳು. ಕ್ರೈಂ ರಿಪೋರ್ಟರ್ ಆಗಿ ಅರ್ಚನಾ ಕಾಣಿಸಲಿದ್ದಾರೆ.

ಜಾಕಿ ಶ್ರಾಫ್ ಈ ಹಿಂದೆ 'ಕೇರ್ ಆಫ್ ಫುಟ್ ಪಾತ್' ಚಿತ್ರದಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಿದ್ದರು. ಇನ್ನೂ ಬಿಡುಗಡೆಯಾಗದ 'ಜಮಾನಾ' ಚಿತ್ರದಲ್ಲೂ ಜಾಕಿ ಶ್ರಾಪ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರದು ಪೊಲೀಸ್ ಇನ್ಸ್ ಫೆಕ್ಟರ್ ಪಾತ್ರ. ಆ ಮರ್ಮದ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಡಿಸೆಂಬರ್ ತಿಂಗಳಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿ ನಿರ್ಮಾಪಕರು.

ಮಧುಸೂಧನ್ ಅವರು ತೆಲುಗಿನಲ್ಲಿ 'ವಂಶಂ', 'ನಂ.1' ಮತ್ತು 'ಪ್ರೇಮ ಚರಿತ' ಚಿತ್ರಗಳನ್ನು ನಿರ್ಮಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ಕನ್ನಡದಲ್ಲಿ 'ಆ ಮರ್ಮ' ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ತೆಲುಗು 'ವಂಶಂ' ಚಿತ್ರ ಅತ್ಯುತ್ತಮ ಚಿತ್ರ ಸೇರಿದಂತೆ 15 ಪ್ರಶಸ್ತಿಗಳನ್ನು ಪಡೆದಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada