»   »  ಆ ದಿನಗಳು ಚೈತನ್ಯರ ಹೊಸ ಚಿತ್ರ ಸೂರ್ಯಕಾಂತಿ

ಆ ದಿನಗಳು ಚೈತನ್ಯರ ಹೊಸ ಚಿತ್ರ ಸೂರ್ಯಕಾಂತಿ

Subscribe to Filmibeat Kannada
KM Chaitanya
ಕನ್ನಡ ಚಿತ್ರಗಳ ಏಕತಾನತೆಯನ್ನು ಮುರಿದ 'ಆ ದಿನಗಳು' ಚಿತ್ರದ ನಾಲ್ಕು ಮಂದಿ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ . ನಿರ್ದೇಶಕ ಕೆ.ಎಂ. ಚೈತನ್ಯ ಎರಡನೆ ಇನ್ನಿಂಗ್ಸನ್ನು ನಟ ಚೇತನ್, ಛಾಯಾಗ್ರಾಹಕ ಎಚ್.ಸಿ.ವೇಣು, ಸಂಗೀತ ನಿರ್ದೇಶಕ ಇಳಯರಾಜ ಅವರೊಂದಿಗೆ ಆರಂಭಿಸಲಿದ್ದಾರೆ.

ಕೆ.ಎಂ.ಚೈತನ್ಯ ಅವರ ಹೊಸ ಚಿತ್ರದ ಹೆಸರು 'ಸೂರ್ಯಕಾಂತಿ'. ಈ ಚಿತ್ರವನ್ನು ವಾಸು ನಿರ್ಮಿಸುತ್ತಿದ್ದಾರೆ.ಮಂಜುನಾಥ ಹಾಗೂ ಜಗನ್ನಾಥ್ ನಿರ್ಮಾಣ ನಿರ್ವಹಣೆ ಜಬಾಬ್ದಾರಿಯನ್ನು ಹೊತ್ತಿದ್ದಾರೆ. ಈ ಹಿಂದೆ ಮಂಜುನಾಥ್ 'ಎ' ಚಿತ್ರವನ್ನು ನಿರ್ಮಿಸಿದ್ದರು.

ಸದ್ಯಕ್ಕೆ ಕನ್ನಡ ಚಿತ್ರೋದ್ಯಮ 'ಅಮೃತ ಮಹೋತ್ಸವ'ದ ಸಡಗರ, ಸಂಭ್ರಮದಲ್ಲಿದೆ. ಅಮೃತ ಮಹೋತ್ಸವದ ಸದ್ದಡಗಿದ ನಂತರ ಚೈತನ್ಯರ ಚಿತ್ರ ಸೆಟ್ಟೇರಲಿದೆ. ಬೆಂಗಳೂರು, ಗೋವಾ, ಬೆಳಗಾವಿ ಮತ್ತು ರಷ್ಯಾ ಗಡಿಯಲ್ಲಿ ಸೂರ್ಯಕಾಂತಿಯನ್ನು ಚಿತ್ರೀಕರಿಸಲಾಗುತ್ತದೆ. ಹರಿದಾಸ್ ಕೆಜಿಎಫ್ ಅವರ ಸಂಕಲನ, ದಿನೇಶ್ ಮಂಗಳೂರು ಕಲೆ ಸೂರ್ಯಕಾಂತಿಗೆ ಇದೆ. 2009ರ ಸೆಪ್ಟೆಂಬರ್ ತಿಂಗಳಲ್ಲಿ ಸೂರ್ಯಕಾಂತಿಯನ್ನು ಬಿಡುಗಡೆ ಮಾಡಲು ಕೆ.ಎಂ.ಚೈತನ್ಯ ಯೋಜಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ
ಕನ್ನಡ ಚಿತ್ರರಂಗಕ್ಕೆ 15 ದಿನಗಳ ರಜೆ ಬೇಕೆ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada